ಒಮ್ಮೆ ಕದಡಿದ ಕೊಳವು,

ಈ ಕೆಳಗಿನ ಸಾಲುಗಳು ಕನ್ನಡದ ಪಾಪ್ ಗೀತೆಯೊಂದರ ಸಾಲು: ಸಾಲುಗಳ ಜೊತೆ ಅದ್ಭುತ ಸಂಗೀತ ಸೇರಿ ಕೇಳಲು ಖುಷಿಯಾಗುತ್ತದೆ.ಉದಾಹರಣೆಗೆ ಇಲ್ಲೊಂದು ಆ ಆಲ್ಬಮ್ ನ ಹಾಡಿನ ಸಾಹಿತ್ಯ ಹೀಗಿದೆ: ಇಷ್ಟವಿದ್ದಲ್ಲಿ www.kannadaaudio.com ನಲ್ಲಿದೆ ಕೇಳಿ:

ಆಲ್ಬಮ್: ನಿನ್ನ ನೆನೆಪು(2007)
ಸಂಗೀತ: ಎಸ್.ಆರ್.ರಾಮಕೃಷ್ಣ
ಸಾಹಿತ್ಯ:ಎಸ್.ಬಾಗೇಶ್ರೀ

೧. ಒಮ್ಮೆ ಕದಡಿದ ಕೊಳವು,
ಮತ್ತೆ ತಿಳಿಯಾಗಿರಲು,
ತಳದೀ ಮಲಗಿಹ ಕಲ್ಲು ನಿನ್ನ ನೆನಪು:

ಅಡಿ ಅಡಿಯನು ಎಣಿಸಿ,
ಇಡು ಮನದ ಮೂಲೆಯಲಿ,
ಹುಚ್ಚು ಓಟದ ಬಯಕೆ ನಿನ್ನ ನೆನಪು:

ಬೇಸರವು ಕವಿದಿರಲು,
ಎಲ್ಲ ಕಹಿಯಾಗಿರಲು,
ಸಿಹಿಕನಸ ನೇವರಿಕೆ ನಿನ್ನ ನೆನಪು:

ಬಹಳ ಬಹಳ ಬಳಸಿ ಹಳಸಿದ,
ಪದಪುಂಜಗಳ ನಡುವೆ,
ಹೊಸತ ಹೊಳೆಸುವ ಪ್ರತಿಮೆ ನಿನ್ನ ನೆನಪು:

ಜಗವೆಲ್ಲ ಹೊಗಳಿರಲು,
ನಾನೇ ನಾನೆಸಿರಲು,
ಎದೆಯಾಳದ ಅಳುಕು ನಿನ್ನ ನೆನಪು:

ಎಲ್ಲ ವಾದದ ಕೊನೆಗೆ,
ಆವರಿಸೋ ಮೌನದ,
ತರ್ಕ ಮೀರಿದ ಭಾವ ನಿನ್ನ ನೆನಪು:

HATS OFF BHAGESHREE....
 

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಚಲಿತ ಪೋಸ್ಟ್‌ಗಳು