ಕರ್ವೇಶ್ವರಿ
ತಿರುವುಗಳಿದ್ದಷ್ಟು ರಸ್ತೆ ಸೊಗಸು
ಆದರೆ ಪಯಣವಲ್ಲ
ಪ್ರತಿ ತಿರುವುಗಳ ಮುಂದೆ
ಸೈನ್ ಬೋರ್ಡ್
ಅಪಘಾತ ವಲಯ ನಿಧಾನವಾಗಿ ಚಲಿಸಿ
ಎಂಬ ಎಚ್ಚರಿಕೆ ಗಂಟೆ
ಬರೀ ರಸ್ತೆಗಳಿಗಲ್ಲ ಸೌಂದರ್ಯದ ತಿರುವುಗಳು
ಅಷ್ಟೇ ಅಪಾಯಕಾರಿ
ಕತ್ತಿನಾಚೆಗೊಂದು ತಿರುವು
ಉಬ್ಬು - ಏರಿಳಿತ
ಸೊಂಟದಂಚಿನ ತಿರುವು ಅಪಾಯಕಾರಿ ತಿರುವು
ಬಿದ್ದರೆ ಸೀದ ಪ್ರಪಾತ
ಕಂಡ ಬೆಟ್ಟದ ಹಿಂಭಾಗ ತಿರುವಲ್ಲಿ
ಅದೆಷ್ಟು ಆಸೆಗಳ ಆತ್ಮಹತ್ಯೆ !
ನೀನು ಸೌಂದರ್ಯದ ಕರ್ವೇಶ್ವರಿ
ನಿನ್ನೆರಡು ಕರ್ವುಗಳು
ಆತ್ಮಹತ್ಯೆ ಸ್ಪಾಟುಗಳು
ಹಿಪ್ ಟೂ ವೇಸ್ಟ್ ರೇಶಿಯೋ
ಹುಚ್ಚನೆಬ್ಬಿಸಿದ ರಾಶಿಯೋ
ಸಾಯಲೊಂದು
ದಯಾಮರಣ ಕೊಡು
ನಿನ್ನ ದೇಹದ ತಿರುವುಗಳು
ಚಾರ್ಮುಡಿ ಘಾಟಿಗೂ ಸವಾಲು
ನಿನ್ನ ಸವಾರಿ ಮಾಡುವ ಸವಾರರಿಗೆ
ಅದೆಷ್ಟು ತ್ರಾಸಗಳು
ಬೆರಳುಗಳೋ ನಾಲಿಗೆಗಳೋ ತತ್ತರಿಸಿ ಹೋದಾವು
ಆ ತಿರುವುಗಳು ನೈಸರ್ಗಿಕ ತಿರುವುಗಳು
ಯೋಜನೆಗೆ ದಕ್ಕದವು
ಪಡೆಯಬೇಕೊಂದನ ನಾನೀಗ ಸಿಹಿ ಸಾವು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ