"ಪೊರ್ಕಿ" ಎಂದವಳಿಗೆ ಪಾಪು ಆದ ಘಳಿಗೆ......

ಎಲ್ಲ ಹುಡುಗರ,ಗಂಡಸರ ಕೊನೆಗೆ ಮುದುಕರ ಬಾಳಲ್ಲೂ ಕೂಡ ಈ ಹಾಳಾದ್ "ಲವ್ವು" ಎಂಬ ಎರಡುವರೆ ಅಕ್ಷರದ ಮಾಯೆಯೋ, ಛಾಯೆಯೋ ಇನ್ನೆಂತಾದರೂ ಕರೆಯಿರಿ ಕಾಡಿಯೇ ಕಾಡಿರುತ್ತದೆ.ಲವ್ವಿನಿಂದ ಪಡೆದ ನೋವನ್ನು ಕೆಲವರು ಗುಂಡು ಬಿಟ್ಟು,ಗಡ್ಡ ಬಿಟ್ಟು,ಹೊಗೆಬಿಟ್ಟು ವ್ಯಕ್ತಪಡಿಸುತ್ತಾರೆ. ಇನ್ನೂ ಕೆಲವರು TV, ರೇಡಿಯೋದಲ್ಲಿ ಯಾವುದಾದರೂ PATHO ಸಾಂಗ್ ಬಂದರೆ ಸಾಕು ಅದು ಅವರನ್ನು ಕುರಿತಾಗಿಯೇ ಬರೆದಿರುವುದೆಂದು ಗೊಳೋ ಎಂದು ಟಾಯ್ಲೆಟ್ ನಲ್ಲಿ ಕುಳಿತು ಅಳುತ್ತಾರೆ. ನಾನು ಮೇಲಿನ ಎರಡನ್ನು ಮಾಡಿದ ನೆನಪಿದೆ AND ಅವೆರಡು ಅಟ್ಟರ್ ವೇಸ್ಟ್ ಮೆಥಡ್ ಎಂದು ಗೊತ್ತಿದೆ.

WELL, ನನ್ನ ಪ್ರೀತಿಯ ಆರಂಭದ ರೂಪುರೇಷೆಯ ಅವಶ್ಯಕತೆ ಇಲ್ಲಿ ಬೇಡ. ಎಲ್ಲರ ಲವ್ವು ಸ್ಟೋರಿಯಂತೆ ನನ್ನದು ಸಾಧಾರಣ ಕ್ವಾಲಿಟಿಯದ್ದೇ( ಲವ್ವು ಮಾಡುತ್ತಿದ್ದ ವೇಳೆ ಅದು ಅಸಾಧಾರಣವಾದದ್ದೆಂದು, ನಾನು ಅಮರಪ್ರೇಮಿಯೆಂಬ ಭ್ರಮೆಯಿತ್ತು!!) ಒಮ್ಮೆಲೆ CLIMAX ಗೆ ಬರೋಣ. ನಾನು ಅವಳನ್ನು ಪ್ರೀತಿಸುತ್ತಿದ್ದೇನೆ ಎಂದು ಅವಳ ಸ್ನೇಹಿತೆಗೆ ತಿಳಿಸಿದ್ದೆ. ಇದು ನನ್ನ ಮೊದಲ ತಪ್ಪು."ಎರಡು ಜಡೆಗೆ ಮತ್ತೆರಡು ಜಡೆಗಳನ್ನು ಕಂಡರೆ ಆಗದು" ಎಂಬ ಸತ್ಯ ನನಗಾಗ ಗೊತ್ತಿರಲಿಲ್ಲ. ಆ ಪುಣ್ಯಾತಿಗಿತ್ತಿ(ಸದ್ಯ ಆಕೆ ಈಗ ಪುಣೆಯಲ್ಲಿರುವುದರಿಂದ ಹಾಗೆ ಕರೆಯುತ್ತಿದ್ದೇನೆ) ನನ್ನ ಹುಡುಗಿಗೆ(ಆಗ್, ಈಗ ಅವರು ಬೇರೆಯೊಬ್ಬರ ಹೆಂಡತಿ) ಬರುವಾಗ್ಗೆ ಏನೇನು ಹೇಳಿದಳೊ ಗೊತ್ತಿಲ್ಲ ಒಟ್ಟಿನಲ್ಲಿ ಶುದ್ದ ಪ್ರೀತಿಯ ಅಂತ್ಯ ಶ್ರದ್ಧಾಂಜಲಿಯೆಡೆಗೆ ಎಂಬಂತೆ ಕತ್ತನ್ನು ಅಲ್ಲಾಡಿಸಿ ನನ್ನ ತಿರಸ್ಕರಿಸಿ ಹೋದಳು.ಆಕೆ ಹೋಗುತ್ತಿದ್ದುದು ನನಗೆ ಸರಿಯಾಗಿ ಕಾಣಿಸಲಿಲ್ಲ ಓ ನಾನು ಕುರುಡನಾಗಿಬಿಟ್ಟೆನಾ ಎಂದುಕೊಳ್ಳುವಷ್ಟರಲ್ಲಿ ಗೊತ್ತಾದುದು ಅದಕ್ಕೆ ಕಾರಣ ಕಣ್ಣೀರೆಂದು.ಮಾಗಡಿರೋಡ್ ನಲ್ಲಿ ದಿಕ್ಕೆಟ್ಟ ದೇವದಾಸನನ್ನಾಗಿಸಿ ಹೊರಟು ಹೋದಳು.

ಹಾಗೇ ಹೋಗಿ ಸುಮಾರು ಆರು ವರ್ಷಗಳಾದೀತು.ಅಷ್ಟರಲ್ಲಿ ನಾನು ಬೇರೆಯವರು ಅಂದುಕೊಳ್ಳುತ್ತಿದ್ದ ಅವರ DIVINE RELATION ಅನ್ನು ಅಪಹಾಸ್ಯ ಮಾಡುವಷ್ಟು ಪಕ್ವನಾಗಿದ್ದೆ. ಒಂದು ಸಂಜೆ ನನಗೆರಡು ಮಿಸ್ಡ್ ಕಾಲ್ ಬಂದಿದ್ದವು.ತಿಂಗಳಿಗೆ ಎರಡು ಮೂರೋ ಕಾಲ್ ಬರುತ್ತಿದ್ದವನಿಗೆ ಸಡನ್ನಾಗಿ ಎರೆಡೆರಡು ಮಿಸ್ಡ್ ಕಾಲ್ ಬಂದರೆ ಹೇಗಾಗಿರಬೇಡ ಯಾರಪ್ಪ ಆ ಮಹಾನುಭಾವರೆಂದು ನಾನು ಫೋನ್ ಹಚ್ಚಿದೆ, ಅತ್ತ ಕಡೆಯಿಂದ ಮಾತಾಡಿದ್ದು ಅದೇ ಆರು ವರ್ಷಗಳ ಹಿಂದೆ ನನ್ನ ಅನಾಥನನ್ನಾಗಿ ಮಾಡಿ ಹೋದ "ಮದರ್ ಥೆರೆಸಾ". ಅರೇ ಮತ್ತೆ ನನ್ನ ಗ್ರಹಾಚಾರ ತಪ್ಪಿತೇ ಎಂದುಕೊಳ್ಳುವಷ್ಟರಲ್ಲಿ ಆಕೆಯೆ ಶುಭವಾರ್ತೆ ತಿಳಿಸಿದಳು " ಜಯರಾಮ್ ಮುಂದಿನ ಮಂಗಳವಾರ ನನ್ನ ಮದುವೆ, I KNOW I DISTURBED YOU LOT, ನಿನಗೆ ನನಗಿಂತ ಚೆನ್ನಾದ ಹುಡುಗಿ ಸಿಗುತ್ತಾಳೆ" ಎಂದು ರೇಣುಕಾಚಾರ್ಯನಂತೆ ತೀರಾ ಕ್ಷುಲ್ಲಕ ಹೇಳಿಕೆ ನೀಡಿ, ತಾನು ಕೂಡ ಎಲ್ಲ ಹುಡುಗಿಯರಂತೆ ಎಂದು ತೋರಿಸಿಬಿಟ್ಟಳು. ಅಲ್ಲಿಗೆ ನನ್ನ ಆಯ್ಕೆ AVERAGE.

ಈ ಮಾತು ಯಾಕೆ ಹೇಳಿದೆನೆಂದರೆ ಎಲ್ಲ ಹುಡುಗಿಯರು ಜೀವನದಲ್ಲಿ ಎರಡು ಕೆಲಸ ಮಾಡಿಯೇ ಮಾಡುತ್ತಾರೆ
ಒಂದು: ತನ್ನ ಹಳೆಯ ಬಾಯ್ ಫ಼್ರೆಂಡ್ ಗಳನ್ನೆಲ್ಲ ತಪ್ಪದೇ ಮದುವೆಗೆ ಕರೆಯುತ್ತಾರೆ( ಹಾಗೇ ಹೋದವರ ಕಣ್ಣು ಕೀಳಿಸುವುದು ಇತ್ತೀಚಿನ ಟ್ರೆಂಡ್) ವಿಷಾದದ ಸಂಗತಿಯೆಂದರೆ ಅವಳ ಗಂಡನಾಗಲಿರುವ ವರನು ಅವಳ ಬಾಯ್ ಫ಼್ರೆಂಡ್ ಗಳಿಗಿಂತ ಕೆಟ್ಟ ಮುಖದವನಾಗಿರುತ್ತಾನೆ. ಪ್ರೀತಿಸುವ ವಿಷಯದಲ್ಲಿ ಹೈಟು,ಬೈಕು ನೋಡುವ ಹುಡುಗಿಯರು ಮದುವೆ ವಿಷಯದಲ್ಲಿ ಸೈಟು,ಕಾರನ್ನು ನೋಡುತ್ತಾರೆ
ಎರಡು:ಎಲ್ಲ ಬಾಯ್ ಫ಼್ರೆಂಡ್ ಗಳಿಗೆಲ್ಲ "ನನಗಿಂತ ಚೆನ್ನಾದ ಹುಡುಗಿ ನಿನಗೆ ಸಿಗುತ್ತಾಳೆ" ಎಂಬ USE ಮಾಡಿ ಮಾಡಿ ಹಳತಾದ ಡೈಲಾಗ್ ಹೇಳುತ್ತಾರೆ. AND FORTUNATLEY ಇದೊಂದು ವಿಷಯದಲ್ಲಿ ಅವರು ಸರಿ ಹೇಳುತ್ತಾರೆ

WELL HAPPY ENDING ಅವಳಿಗೆ ಮದುವೆಯಾಯ್ತು,ನನ್ನ ಬಿಡುಗಡೆಯಾಯ್ತು ಇನ್ನು ನಾನು ಏನಾದರೂ ಆಕೆಯ ಕನವರಿಸಿದರೆ ನಾನೊಬ್ಬ UNFIT FOR THIS WORLD. ಕಾಶಿಗೆ ಹೋದರೂ ಶನಿರಾಯ ಬಿಡನಂತೆ. ನನ್ನ ಆತ್ಮಿಯ ಮಿತ್ರನಿಗೆ ಆಕೆ ಆಗಾಗ್ಗೆ ಕಾಲ್ ಮಾಡುತ್ತಿದ್ದಳು. ಆಶ್ಚರ್ಯಪಡಬೇಡಿ, ಒಬ್ಬ ಹುಡುಗಿ SORRY ಹೆಂಡತಿ ತನ್ನ ಗಂಡನನ್ನು ಬಿಟ್ಟು ಬೇರೆಯ ಗಂಡಸಿಗೆ ಫೋನ್ ಮಾಡಿದರೆ ಒಂದೇ ಕಾರಣ "SHE NEEDS SOME HELP"(SORRY ಇದು ನನ್ನ ಮಾತಲ್ಲ ಶೇಕ್ಸ್ ಫಿಯರ್ ನದು ಸ್ವಲ್ಪ ತಿರುಚಲಾಗಿದೆ). YES, ಆಕೆ ಮದುವೆ ನಂತರ ತನ್ನ ವಿಧ್ಯಾಭ್ಯಾಸ ಮುಂದುವರಿಸಿದ್ದಳು, STUDY MATERIALS ಗಾಗಿ ನನ್ನ ಗೆಳೆಯನಿಗೆ ಫೋನ್ ಮಾಡುತ್ತಿದ್ದಳೆಂದು ಆತನೇ ಹೇಳಿದ್ದ. ಆ ಪುಣ್ಯಾತ್ಮ ಆಕೆ ಅವನಿಗೆ ಫೋನ್ ಮಾಡಿದಾಗಲೆಲ್ಲ, ನನಗೆ ಅದನ್ನು ಫೋನ್ ಮಾಡಿ ತಿಳಿಸುತ್ತಿದ್ದ. ನನ್ನ ಸ್ಥಿತಿ-ಗತಿ ನೀವೇ ಯೋಚಿಸಿ.ಇರಲಿ, ಒಂದು ದುರಾದೃಷ್ಟವಶಾತ್ ಗಳಿಗೆ ನಾನು ನನ್ನ ಗೆಳೆಯ ಮತ್ತು ಆಕೆ BMS ಕಾಲೇಜಿನ ಆವರಣದಲ್ಲಿ ಭೆಟ್ಟಿಯಾದೆವು. ಹೆಸರು ಗೊತ್ತಿಲ್ಲದ ಯಾವುದೋ ಮರದ ಕೆಳಗೆ ಮಾತಾಡಲು ಶುರುವಾದವು. ಹಾಳಾದ್ ಮಳೆ ಧೋ ಎಂದು ಶುರುವಾಯ್ತು. ಆ ದಿನ ಅವಳನ್ನು ಸುಮಾರು ಒಂದಷ್ಟು ಪ್ರಶ್ನೆಗಳನ್ನು ಕೇಳಬೇಕೆಂದಿದ್ದೆ.ಅವು ಕೆಳಕಂಡಂತಿವೆ.
1."ಗಂಟೆಗಟ್ಟಲೇ ಒಂಟಿಗಾಲಲ್ಲಿ ನಿನ್ನ ಕಾಯುವಾಗ ನನ್ನ ಕಾಲು ನೋವು ನಿನಗೆ ಗೊತ್ತಾಗುತ್ತಿತ್ತೇ"(ಇದು ನಮ್ಮ ಊರಿನವರಿಗೆ ಗೊತ್ತಾದರೆ ಅರೆ ಯಾಕ್ಲಾ ಬಡೇತ್ತದೇ ಎರಡು ಕಾಲಲ್ಲೂ ಕಾಯೋದಲ್ವೇ? ಎಂದು ಕೇಳಿಬಿಡುತ್ತಾರೆ)
2."ನಿನ್ನ ಹಿಂದೆಯೇ ಹೆಚ್ಚು ಕಡಿಮೆ ನಿನ್ನ ನೆರಳಂತೆ ಅಲೆದ್ದುದು ನೀನು ಒಂಟಿಗಾಲಲ್ಲಿ ಗಮನಿಸಿದ್ದೇಯಾ?"
3."ಬಾಯ್ ಎಂದು ಬಿಟ್ಟೋದಾಗ ಕಣ್ಣಂಚಿನ ನೀರು ಕಾಣಿಸಿತ್ತೇ?"
4."ಮದುವೆಯಾದ ಮೇಲೂ ನನ್ನ ನೆನಪಾಗಿತ್ತೇ?"(ನಗು ಬಂದರೆ ನಕ್ಕು ಬಿಡಿ) AND FINALLY
5."ನಿನ್ನ ಪತಿರಾಯ ನನಗಿಂತ ಹೇಗೆ ಭಿನ್ನ?"

ಮನಸಲ್ಲೇ ಈ ಪ್ರಶ್ನೆಗಳನೆಲ್ಲಾ ನೋಟ್ ಮಾಡಿಕೊಳ್ಳುತ್ತ ಒಳ್ಳೇ ಗಳಿಗೆಗಾಗಿ ಕಾಯುತ್ತಿದ್ದೆ, ತಟ್ಟನೇ ಆಕೆ ಯಾವುದೋ ವಿಷಯಕ್ಕೆ " ಅದೇ ಆ ಕಾಮಾಕ್ಷಿಪಾಳ್ಯದ ಬಸ್ ಸ್ಟಾಪ್ ನಲ್ಲಿ ನಿಂತ್ಕೊಂಡಿರ್ತಾರಲ್ಲ ಪೊರ್ಕಿಗಳೂ ಅವರ ತರಹ" ಎಂದು ನನ್ನ ನೋಡಿ ವ್ಯಂಗ್ಯ ನಗೆ ನಕ್ಕಳು. ಅವಳು ಯಾವ ವಿಷಯಕ್ಕೆ ಅದನ್ನೇಳಿದ್ದಳೋ ಗೊತ್ತಿಲ್ಲ, ಆದರೆ ಅವಳ ವ್ಯಂಗ್ಯ ನಗೆಯ ಉದ್ದೇಶ ಬಿಡಿಸಿ ಹೇಳಬೇಕಿಲ್ಲ.

ಈ ಜೂಲಿಯಟ್ ಗಾಗಿ ನಾನು ಗಂಟೆಗಟ್ಟಲೇ ಕಾಮಾಕ್ಷಿಪಾಳ್ಯದ ಬಸ್ ಸ್ಟಾಪಿನಲ್ಲ ಒಂದು ಕಾಲದಲ್ಲಿ ಕಾಯುತ್ತಿದ್ದೆ. ಇಂತಹ ಒಬ್ಬ ಅಮರ ಪ್ರೇಮಿಯನ್ನು ಅವಳು ಕ್ಷಣಾರ್ಧದಲ್ಲಿ ಪೊರ್ಕಿಯನ್ನಾಗಿಸಿಬಿಟ್ಟಳು. ಅಲ್ಲಿಗೆ ನನ್ನ ಆರು ವರ್ಷಗಳು, ಕವಿತೆಗಳು,ಕತೆಗಳು.ಅವಳನ್ನು ಭೆಟ್ಟಿ ಮಾಡಿದ ದಿನದಲ್ಲಿ ಅವಳು ಯಾವ ಡ್ರೆಸ್ ಹಾಕಿದ್ಲು, ಎಷ್ಟು ಗಂಟೆಗೆ ಯಾವ ಬಸ್ ನಲ್ಲಿ ಬಂದಳು ಹೋದಳು,ಅದು ಇದು ಹಾಳು ಮೂಳು ಕಸ ಕಡ್ಡಿ ಬರೆದಿದ್ದ ನನ್ನ ಡೈರಿಯ ಪುಟಗಳೆಲ್ಲಾ ಅರ್ಥ ಕಳೆದುಕೊಂಡು ಕಳಪೆ ಸರಕುಗಳಾಗಿಬಿಟ್ಟವು.ನೀರಿನಲ್ಲಿ ಹೋಮ ಎಂದರೆ ಇದೇ. ಅದೇ ಸಮಯಕ್ಕೆ ದೇವರಂಥ ಮಳೆ ಇನ್ನೂ ಜೋರಾಗಲೂ ಆಕೆ ಮನೆಯಲ್ಲಿ ಅವರ ಅತ್ತೆ ಕೇಳುತ್ತಾಳೆಂದು ಹೇಳಿ ಆಟೋ ಹತ್ತಿದಳು.ನನ್ನ ಗೆಳೆಯ ಮನೆಯವರೆಗೂ ಹೋಗುವಷ್ಟು ದುಡ್ಡಿದೆಯಾ,ಮನೆಯವರೆಗೂ ಆಟೋದಲ್ಲೇ ಹೋಗಿ ಎಂದು ಹೇಳುತ್ತಿದ್ದ.ಗುಡುಗೊಂದು ಕೇಳಿಸಿತು. ಆಕೆ ಟಾಟಾ ಮಾಡುತ್ತಾ ಹೋಗುತ್ತಿದ್ದಳು, ಆ ಟಾಟಾ ಈ ಪೊರ್ಕಿಗಲ್ಲವೆಂದು ಸುಮ್ಮನಿದ್ದೆ.....ಅದೇ ಜೋರು ಮಳೆಯಲ್ಲಿ ಗೆಳೆಯನ ಬೈಕ್ ಹಿಂದೆ ಕುಳಿತು ಬರುವಾಗ ಇಂತಹ ಚೀಪ್ ಮೆಂಟಾಲಿಟಿ ಇರುವ ಹುಡುಗಿಯನ್ನು ಪ್ರೀತಿಸಿಬಿಟ್ಟೆನೆಲ್ಲಾ ಎಂದು ಬೇಜಾರಾಯ್ತು. ಅವತ್ತೇ ನನ್ನ ಆಯ್ಕೆ BELOW AVERAGE ಎಂದು ಗೊತ್ತಾದುದ್ದು. ಮನೆಗೆ ಹೋದವನೇ ನನ್ನ ಡೈರಿಯ ಅವಳ ಹೆಸರಿದ್ದ ಬಿಡಿ ಬಿಡಿ ಹಾಳೆಗಳನ್ನು, ಕತೆಗಳನ್ನು,ಕವಿತೆಗಳನ್ನು ಸುಟ್ಟು ಹಾಕಿದೆ. ಮುಕ್ತ ಮುಕ್ತ ಮುಕ್ತ...

ಈ ದಿನ ಬೆಳಗ್ಗೆ ಅದೇ ನನ್ನ ಸ್ನೇಹಿತ ಆಕೆಗೆ ಮಗು ಆದದ್ದನ್ನು ಖುಷಿಯಿಂದ ಹೇಳಿದ.ಅದೇ ನೆಪದಲ್ಲಿ ಈ ಕತೆ ಬರೆದೆ.ಆಕೆಯ ಬದುಕು ಹಸನಾಗಿರಲಿ, ನನ್ನಂಥ ಎಲ್ಲ ಹುಡುಗರಿಗೂ ಪೊರ್ಕಿ ನಾಮಾಂಕಿತದಿಂದ ಬಿಡುಗಡೆ ಸಿಗಲೀ.....

ಇತೀ ನಿಮ್ಮವ:
ಜಯರಾಮಚಾರಿ.


ಕಾಮೆಂಟ್‌ಗಳು

  1. Well i want to tell you one thing, one can call himself as her boy friend only if she had accepted his proposal.. as per i know she didn't.

    You might be wondering why I am telling this to you. Because in the story you have mentioned about girls calling their ex-boy friend (Or what ever you call them) to their marriage.

    ಒಬ್ಬ ಹುಡುಗಿ SORRY ಹೆಂಡತಿ ತನ್ನ ಗಂಡನನ್ನು ಬಿಟ್ಟು ಬೇರೆಯ ಗಂಡಸಿಗೆ ಫೋನ್ ಮಾಡಿದರೆ ಒಂದೇ ಕಾರಣ "SHE NEEDS SOME HELP"

    And about the above line--> You mean to say after marriage girl should not talk to any other guys. She needed some study material and she collected that's all. Don't give such a bad explanation for that.
    Its that friend mistake that he used to tell him when ever she called him.

    Just because he used to wait for her in bus stop (or where ever), she can't accept his proposal right. Even she has her own feelings just like him. If she had accepted him and then got married to some other person then your story has a meaning.


    Sorry i am very bold in my saying..I think you know this.
    We will talk about this when we meet next time

    ಪ್ರತ್ಯುತ್ತರಅಳಿಸಿ
  2. hahaha....sadist story maga... Never search for love in poems, stories, dairies. You wont understand all this. :) and regarding, porki, guys waiting for girls in bus stand are fit to be called porki's. The writing is below level, because there is no content. Its like one person did something, and you are going on dictating things, based on a single experience. First understand what is love, amele, kathe, kavana yella bariyana bidappa :( iwanu yaav dress haakde antha note maadkonda, adakke awlu love maadbeka? and if so much in love, you should've told it directly. Courage is important. If you don have all those things, its better to write stories in blogs only.

    ಪ್ರತ್ಯುತ್ತರಅಳಿಸಿ
  3. and ask your friend whether he's a gal/guy? Because mostly gals, keep sharing such things and its usually called bitching. :P Guys are not supposed to be doing all these. Papa, she's got a baby. take one toy train and give it. Atleast she can play in metro, forget travelling in it. It'll still take about 100 years for Manmohan Singh to come to b'lore :P

    ಪ್ರತ್ಯುತ್ತರಅಳಿಸಿ
  4. @ Manoj bhat...i need time to read such a long comment and to answer for too...thamma atyamulya commentsgalige vandanegalu:)

    ಪ್ರತ್ಯುತ್ತರಅಳಿಸಿ
  5. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  6. SING YOURSELF WITH THE TUNE NAANU CHIKKAVANAGIDDAGA(BY B R LAKSHMAN RAO)

    When I was just a lad of ten, my father said to me,
    Come here and learn a lesson from the lovely lemon tree.
    Don’t put your faith in love, my boy, my father said to me,
    I fear you’ll find that love is like the lovely lemon tree.

    Lemon tree very pretty and the lemon flower is sweet
    But the fruit of the poor lemon is impossible to eat.
    Lemon tree very pretty and the lemon flower is sweet
    But the fruit of the poor lemon is impossible to eat.

    Beneath the lemon tree one day, my love and I did a lie
    A girl so sweet that when she smiled the sun rose in the sky.
    We passed that summer lost in love beneath the lemon tree
    The music of her laughter hid my father’s words from me:

    Lemon tree very pretty and the lemon flower is sweet
    But the fruit of the poor lemon is impossible to eat.
    Lemon tree very pretty and the lemon flower is sweet
    But the fruit of the poor lemon is impossible to eat.

    One day she left without a word. she took away the sun.
    And in the dark she left behind, I knew what she had done.
    She’d left me for another, it’s a common tale but true.
    A sadder man but wiser now I sing these words to you:

    Lemon tree very pretty and the lemon flower is sweet
    But the fruit of the poor lemon is impossible to eat.
    Lemon tree very pretty and the lemon flower is sweet
    But the fruit of the poor lemon is impossible to eat

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಚಲಿತ ಪೋಸ್ಟ್‌ಗಳು