ಕ್ಷಮೆಯೊಂದಿಗೆ ಕೊನೆ ಹಾಡಿ:
"ನಾವು ನಮ್ಮ ತಪ್ಪುಗಳಿಗೆ ಒಳ್ಳೆಯ ಲಾಯರ್ ಗಳು, ಬೇರೆಯವರ ತಪ್ಪುಗಳಿಗೆ ಒಳ್ಳೇಯ ಜಡ್ಜುಗಳು"
"ಪೊರ್ಕಿ"ಎಂದವಳಿಗೆ ಪಾಪು ಆದ ಘಳಿಗೆ...ಕತೆಗೆ COMMENT ಮಾಡಿದ ಎಲ್ಲರಿಗೂ ನಮಸ್ಕಾರಗಳು. ಮೊದಲ ಬಾರಿ ನನ್ನ ಕತೆಗೆ ಸಲಹೆ,ಟೀಕೆಗಳು ಬಂದಿವೆ. ನನ್ನ ಬರವಣಿಗೆಯ ಜವಬ್ದಾರಿಯನ್ನು ತಿಳಿಸಿವೆ.SO I AM VERY HAPPY. TO BE FRANK ಈ ಕತೆಯಲ್ಲಿ ಮಾನ್ಯ ಮನೋಜ್ ಭಟ್ಟರು ಹೇಳುವಂತೆ ಯಾವುದೇ CONTENT ಇಲ್ಲ, ಆದರೂ ಪ್ರಕಟಿಸಿದ ಕಾರಣ ಒಂದೇ: ನಾನು ಬರೆಯುವುದು ಬಿಟ್ಟು ಸುಮಾರು ವರ್ಷವೇ ಆದ್ದರಿಂದ ಹಾಗೂ ನನ್ನ ಬ್ಲಾಗನ್ನು UPDATE ಮಾಡಬೇಕಾದ್ದರಿಂದ ಬರೆದೆ,ಪ್ರಕಟಿಸಿದೆ. ಅಚ್ಚರಿಯ ಸಂಗತಿಯೆಂದರೆ ನನ್ನ ಈ BACKUP ಕತೆಗೇನೆ ಇಷ್ಟರ ಮಟ್ಟಿಗೆ COMMENTS ಬಂದಿರುವುದು.(ಇದೇ ಬ್ಲಾಗಿನಲ್ಲಿರುವ ಇತರೆ ನನ್ನ ಬರಹಗಳಿಗೂ ಇಂತಹುದೇ ಟೀಕೆ-ಸಲಹೆಗಳು ಬರಲಿ) ಆದರೆ ಕತೆ ಬರೆದ ಮೇಲೆ ಅದರ ಮೇಲಿನ ಟೀಕೆಗಳಿಗೆ ಸ್ಪಂದಿಸುವದು ನನ್ನ RESPONSIBILITY.ಹಾಗೇಯೇ ಮನೋಜ್ ಭಟ್ಟರು ನಿಜವಾದ ಪ್ರೀತಿಯ DEFINATION ಹೇಳಲಿಕ್ಕೆ ಹೊರಟಿದ್ದಾರೆ ಅದನ್ನು ಕೇಳಿ ನನ್ನ ತಲೆ ಎರಡು ಹೋಳಾಗುವ ಮುನ್ನ ಇದನ್ನು ಬರೆಯುತ್ತಿದ್ದೀನಿ. ಅವರೇ ಹೇಳುವಂತೆ ಆಕೆಯ ಮಗುವಿಗೆ ಒಳ್ಳೆಯ TOY ತಂದುಕೊಡಲು ನಿರ್ಧರಿಸಿದ್ದೇನೆ.
ನನ್ನ ಪ್ರಕಾರ ಒಂದು ಕತೆಯಾಗಲೀ ಕಾದಂಬರಿಯಾಗಲಿ ಮಹತ್ವ ಕಂಡುಕೊಳ್ಳುವುದು ವಾಚಕ(READER) ಬರಹಗಾರನ ಆಶಯದಿಂದ ಓದಿದಾಗ,ಸದ್ಯದ ಕಮೆಂಟ್ಸ್ ನೋಡಿದರೆ ಹಾಗನಿಸುತ್ತಿಲ್ಲ.ನಾನು ತೀರ ಕಾಯುತ್ತಿರುವುದು ಗೆಳೆಯ ನಾಗಭೂಷಣ ನ ಅಭಿಪ್ರಾಯಕ್ಕೆ. ಯಾಕೆಂದರೆ ಆತ ನನ್ನೆಲ್ಲ ಕತೆಗಳನ್ನು ಓದಿದ್ದಾನೆ ಆತನ ಬಗ್ಗೆಯೇ ಬರೆದಾಗ ನಕ್ಕು ನನ್ನ ಅಭಿನಂದಿಸಿದ್ದಾನೆ. ಬಹುಶ: ನನ್ನ ಕತೆಗೆ ಒಳ್ಳೇಯ JUDGE ಎಂದರೆ ಆತ ಎಂದು ನನ್ನ ಅಭಿಪ್ರಾಯ.(ನೆನ್ನೆ ಬೆಳಗ್ಗೆ ಕಾಲ್ ಮಾಡಿ ಓದಿದ್ದೇನೆಂದು ಹೇಳಿದ್ದಾನೆ ನಾನು ಗಮನಿಸಿದ ತಪ್ಪನ್ನು ಅನುಮೋದಿಸಿದ್ದಾನೆ ಜೊತೆಗೆ ಕೆಲವು ಸಾಲುಗಳು ಸಾರ್ವಕಾಲಿಕವಲ್ಲವೆಂದು ಹೇಳಿದ್ದಾನೆ:)
ಇರಲಿ, ಇಡೀ ಕತೆಯಲ್ಲಿ ನನಗೆ ಕಂಡು ಬಂದ ತಪ್ಪೆಂದರೆ " ಮದುವೆಯಾದ ಹುಡುಗಿಯರು ಬೇರೆಯವರಿಗೆ ಕಾರಣವಿಲ್ಲದೇ ಫೋನ್ ಮಾಡಲೇಬಾರದು" ಎಂಬ ಉದ್ಧಟ ಹೇಳಿಕೆ. ಇದು ನನ್ನ ತಪ್ಪು.SO "ತಪ್ಪಾಯ್ತು , ತಿದ್ಕೋತೀನಿ." ಇದನ್ನು ಗಮನಕ್ಕೆ ತಂದ "ಮನಸಾಕ್ಷಿ"ಯವರಿಗೆ ವಂದನೆಗಳು.ಇನ್ನು BOYFRIEND ಎಂಬ ಪದವು "ಪ್ರೇಮನಿವೇದಕ"ರ ಬದಲು ಸುಳಿದಿದೆ. ಆದರೆ ಇದರ ಬಗ್ಗೆ ಸಂಶಯಬೇಡ ಒಂದು ಹುಡುಗಿ ತನ್ನ ಪ್ರೇಮನಿವೇದಕರಿಗೆ ಮದುವೆ ಆಹ್ವಾನ ಹಂಚುವುದು ಸಾಮಾನ್ಯ. ಅದನ್ನು ಅಲ್ಲಗಳೆಯುವವರಿಗೆ ನಾನೇನೂ ಹೇಳಲಾರೆ.ಬದಲಾಗಿ ಇಲ್ಲಿಂದಲೇ ಕೈಮುಗಿಯುತ್ತೇನೆ.ಇನ್ನು ಕೆಲವರ ಪ್ರಶ್ನೆಯೆಂದರೆ "ನೀನು ನಿಂತ ಮಾತ್ರಕ್ಕೆ, ಕತೆ ಕವಿತೆ ಬರೆದ ಮಾತ್ರಕ್ಕೆ ಆಕೆ ನಿನ್ನ ಪ್ರೀತಿಸಬೇಕಿತ್ತೇ?" ಖಂಡಿತಾ ಇಲ್ಲ, ಹಾಗೇನಾದರೂ ಮೇಲಿನ ಕಾರಣಕ್ಕೆ ಒಪ್ಪಿಕೊಂಡರೆ ಆ ಹುಡುಗಿ ಶತ ದಡ್ಡಿ. ಆಕೆಗಾಗಿ ನಾನು ಎಷ್ಟು ದಡ್ಡನಾಗಿದ್ದೆ ಎಂದು ನನ್ನ ನಾ ಪ್ರಶ್ನಿಸಿಕೊಂಡಿರುವುದು.ನಿಜವಾದ ಪ್ರೀತಿಯಬಗ್ಗೆ EXPLAIN ಮಾಡುವವರಿಗೆ ಇಲ್ಲಿಂದಲೇ ದೀರ್ಘದಂಡ ಪ್ರಮಾಣಗಳು!!.ಮನೋಜ್ ಇದು "BLAMED GAME" ಅಂದಿದ್ದಾರೆ ನಾನು ಯಾವ ಸಾಲಿನಲ್ಲೂ ವೈಯುಕ್ತಿಕವಾಗಿ ಯಾರನ್ನೂ ನಿಂದಿಸಿಲ್ಲ ಎಂದೂ ಅವರ ತಲೆಯ ಮೇಲೆಯೇ ಆಣೆ ಇಡುತ್ತಿದ್ದೇನೆ :):)
ಖುಷಿಯ ಸಂಗತಿಯೆಂದರೆ ಎಲ್ಲರೂ ಮುಕ್ತ(BOLD) ಮನಸ್ಸಿನಿಂದ ತಮ್ಮ ಅಭಿಪ್ರಾಯ ಹೇಳಿರುವುದು, HATS OFF TO ALL.
ನನ್ನ ತಪ್ಪನ್ನು ಗಮನಕ್ಕೆ ತಂದ ಎಲ್ಲರಿಗೂ THANKSO THANKS. ನಿಮ್ಮ ಈ ಟೀಕೆ-ಸಲಹೆ ಮುಂದುವರಿಯುತ್ತಿರಲಿ. "FINALLY ತಪ್ಪಾಯ್ತು ತಿದ್ಕೋತೀನಿ."
ಕ್ಷಮೆಯೊಂದಿಗೆ ಕೊನೆ ಹಾಡಿ
ಇತೀ ನಿಮ್ಮವ:
ಜಯರಾಮಚಾರಿ
prabudda lekaka agbitte nenu
ಪ್ರತ್ಯುತ್ತರಅಳಿಸಿNinu pustaka oodiganalla, ivathu, nimma baravanige oodida mele , nansgu oduva manasagide....dhanyavadagalu.
ಪ್ರತ್ಯುತ್ತರಅಳಿಸಿ