100% ಡುಬಾಕ್ ಅಡಕಸಬಿ ಪ್ರೇಮ ಕತೆ


 ಚಳಿಗಾಲದ ಡಿಸೆಂಬರಿನ ನಡುಗುವ ಒಂದು ಕಿತ್ತೋದ ಕಿತ್ತಳೆಬಣ್ಣದ ಬೆಳಗ್ಗಿನ ವೇಳೆ ಕಲಾಸಿಪಾಳ್ಯದ ಘಮಭರಿತ ಬಸ್ಸ್ಟಾಪಿನಲ್ಲಿ ನನಗಾಗಿಯೇ ಭೂಮಿಗೆ ಇಳಿದಂತ, ಕೈ ಕಟ್ಟಿ ನಿಂತಅವಳನ್ನು ಕಂಡೆ೧೦೦ % ಪರ್ಫೆಕ್ಟ್ ಗರ್ಲ್.

ನಿಜ ಹೇಳ್ತೀನಿನೀವು ಅಂದುಕೊಂಡಂತೆ ಆಕೆ ಅಷ್ಟೇನೂಚೆನ್ನಾಗಿರಲಿಲ್ಲಅವಳ ಬಟ್ಟೆ ಅಸ್ತವ್ಯಸ್ತವಾಗಿತ್ತುಆಗಷ್ಟೇನಿದ್ದೆಯಿಂದ ಎದ್ದು ಮುಖಕ್ಕೆ ನೀರೆರೀಚಿಕೊಂಡು ಬಂದಿದ್ದಳುಕೂದಲು ಕೂಡ ಬಾಚಿರಲಿಲ್ಲ   ನಿದ್ದೆಯ ಹೊಡೆತಕ್ಕೆ ಸಿಕ್ಕು ವಿಚಿತ್ರಆಕಾರ ಪಡೆದುಕೊಂಡಿತ್ತುಅಷ್ಟಕ್ಕೂ ಆಕೆ ಗರ್ಲ್ ಅಂದು ಕರೆಯುವ ಹುಡುಗಿಯಲ್ಲಹೆಂಗಸು ಅಂದುಕೊಳ್ಳಿಮೂವತ್ತುದಾಟಿದ್ದಳುಆದರೆ ಯಾಕೋ  ದಿವ್ಯ ಭವ್ಯ   ಗಳಿಗೆಯಲ್ಲಿ ಅವಳೇ ನನಗೆ ೧೦೦ % ಪರ್ಫೆಕ್ಟ್ ಗರ್ಲ್ ಅಂತ ಅನಿಸಿತ್ತುಕಣ್ಣಲ್ಲಿ ಮಿಂಚೊಂದು ಬಂದು ಎದೆ ಗುಡುಗಿದ್ದು ಸುಳ್ಳಲ್ಲ.


ಬಹುಶಃ ನಿಮ್ಗೆಲ್ಲ ನಿಮ್ಮದೇ ಟೈಪಿನ ಕನಸಿನ ಹುಡುಗಿ ಇರುತ್ತಾಳೆಅಥವಾ ಇಲ್ಲದಿದ್ದರೂ ಅಂತ ಹುಡುಗಿ ಬೇಕೆನಿಸಿರುತ್ತೆಹೀಗೆ ಹಂಸಲೇಖನ  ದರಿದ್ರ ಹಾಡು ಬಂಗಾರದಿಂದ ಬಣ್ಣನ ತಂದಕೇಳಿ ನಿಮ್ಮ   ಟೈಪಿನ ಹುಡುಗಿ ಬೇರೆ ತರ ಇರ್ರ್ತಾಳೆ ಮುಖಹೊಳೆಯಬೇಕುದಾಳಿಂಬೆ ಹಲ್ಲುಗಳಿರಬೇಕು,   ಬಾಳೆದಿಂಡಿನಂತ ತೊಡೆಯಿರಬೇಕುಒಂದೊಂದ್ ಸಲ ಡೇಟ್ ಗೆ ಚಾಟ್ ಗೆಯಾರು ಸಿಕ್ಕರೂ ಹಲ್ಲು  ಕಿಸಿದು ಹೋಗಿಬಿಡುತ್ತೀರ, ಆದರೆನನಗೆ ಹಾಗಲ್ಲನನಗೆ ನನ್ನದೇ ಆದ ಕೆಲವು ಪ್ರೀಪರೇನ್ಸ್ಇದೆ,   ಒಂದೊಂದ್ ಸಲ ಬಸ್ಸಿನಲ್ಲಿ ಮುಂದೆ ಕೂತ ಹುಡುಗಿಯ ಉದ್ದನೆಯ ಕೂದಲುಅಲ್ಲೆಲ್ಲೋ   ಹೋಟೆಲಿನಲ್ಲಿ ಕೂತಹುಡುಗಿಯ ಚೂಪು ಮೂಗು ಕೂಡ ಇಷ್ಟವಾಗಿಬಿಡುತ್ತೆ.

ಆದರೆ ಯಾರು ಕೂಡ ನನಗಾಗಿ  ಭೂಮಿಗೆ ಬಂದವಳಂತೆಅನಿಸಿರಲಿಲ್ಲಇವಳೊಬ್ಬಳನ್ನು ಬಿಟ್ಟುನಾನು ಇಷ್ಟ ಪಡುವಂತಉದ್ದ ಕೂದಲು ಆಗಲಿಚೂಪು ಮೂಗು ಆಗಲಿ ಇವಳಿಗಿರಲಿಲ್ಲನಿಜಕ್ಕೂ ಅವಳಿಗೆ ಅಂತ ಸೌಂದರ್ಯ ಇರಲಿಲ್ಲಆದರೆ ನನ್ನನುಆಳವಾಗಿ ಸೆಳೆಯುವ ಒಂದು ತಿಕ್ಕಲು ಸೆಳೆತ ಅವಳಲ್ಲಿ ಇತ್ತುತಿಕ್ಕಲು ಏನು ಎಂದು ನಿಮಗೆ ಹೇಳಲು ನನಗೆ ಸದ್ಯ ಹೇಗೆ ಎಂದುಗೊತ್ತಾಗ್ತಿಲ್ಲ.

"ಕೊನೆಗೂ ನಾನು ಇಷ್ಟ ಪಡುವ ೧೦೦ ಪರ್ಫೆಕ್ಟ್ ಗರ್ಲ್ಸಿಕ್ಕಳುಕಲಾಸಿಪಾಳ್ಯದ ಬಸ್ ಸ್ಟಾಪಳ್ಲಿ ಇದ್ಲು " ಎಂದೆ ಅವನಿಗೆ

ಅವನು ಗಾಬರಿಲಿ "ಹೌದಾ? ಸಕ್ಕತ್ತಾಗಿ ಇದ್ದಾಳ? ಎಂದ

ಇಲ್ಲ ಅಂದೆ

ನಿನ್ನ ಟೈಪು ಗರ್ಲ ಅಂದ

ಗೊತ್ತಿಲ್ಲಇವಾಗ ನೆನೆಸಿಕೊಂಡರೆ ಅವಳ ಮೂಗಿನ ಚೂಪುಸೊಂಟದ ಸೈಜು ನೆನಪಾಗ್ತಿಲ್ಲ ಅಂದೆ

ವಿಚಿತ್ರ ಅಂದ

ಹೌದು ವಿಚಿತ್ರ ಅಂದೆ

ಅವನಿಗಾಗ್ಲೇ ಬೋರಾಗಿ ಸರಿ ಮತ್ತೆ ಅಂದಅವಳನ್ನಫಾಲೋ ಮಾಡುದ್ಯ ಅಂದ

ಇಲ್ಲ ಅವಳು ಬಸ್ ಸ್ಟಾಪಳ್ಲಿ ಇದ್ದಳುನಾನು ಬಸ್ಸತ್ತಿ ಬಂದೆಅಂದೆ

 

ಅವಳು ಬಸ್ಸು ಹತ್ತುತ್ತಿದ್ದಳುನಾನು ಬಸ್ಸು ಇಳಿಯುತ್ತಿದ್ದೆಅವಳಬಸ್ಸು ರೈಟಿಗೋಯ್ತುನಾನು ಲೆಫ್ಟ್ ಆದೆ

 ! ಹಾಯ್ ಹಲೋ ಎನ್ನಬೇಕಿತ್ತುಒಂದರ್ಧ ಗಂಟೆಮಾತಾಡಬೇಕಿತ್ತುಎಲ್ಲಿರೋದು ಏನು ನಿಮ್ಮ ಹೆಸ್ರು ಅಂತಪೆಕ್ರೂ ಪೆಕ್ರಾಗಿ ಕೇಳಬೇಕಿತ್ತುಮುಖಕ್ಕೆ ಉಗೀತಿದ್ಳಾ? ಅವಳುಮತ್ತೆ ಹಾಯ್ ಎಂದು ಹಲೋ ಎಂದು ಅವಳ ಹೆಸರ ಹೇಳಿನಿಮ್ಮ ಹೆಸರೇನು ಎಂದು ಕೇಳಿ ಮುಂಗುರುಳ ಸರಿಸಿದ್ದಲ್ಲಿ ,ಒಂದು ಕಾಫಿ, ಒಂದು ಲಂಚುಒಂದು ಕಾರ್ನರ್ ಸೀಟಿನಸಿನಿಮಾಒಂದು ಮಧುರ ಪ್ರಣಯ

ಚೆ ಏನೆಲ್ಲ ಆಗ್ತಾ ಇತ್ತುಮಾತಾಡಿಸಬೇಕಿತ್ತು.

ಈಗ ನನಗೂ ಅವಳಿಗೂ ನಡುವೆ ೫೦ ಮೀಟರ್ ಗ್ಯಾಪುಬಸ್ಸಿಂದ ಇಳಿದು ಮಾತಾಡಿಸಲ? ಏನು ಎಂತ ಮಾಡಿಸುವುದು

ಹಾಯ್ ನನ್ನ ಹೆಸರು ತಿಪ್ಪೆಶ್ಚೆ ಇದೆಂತ ತಿಪ್ಪೆಹಾಯ್ ನಾನುಯಶ್ಒಂದತ್ತು ನಮಿಷ ಮಾತನಾಡಬಹುದಾ?

ಯಾವ್ನೋ ಸೇಲ್ಸ್ ಮೇನ್ ಅಂದುಕೊಂಡರೆ?

ಹಾಯ್ ನೀವು ಎಲ್ಲಿಗೆ ಹೋಗೋದು ಎನ್ನಲ

ಕಾಲಿಗಿರುವ ಚಪ್ಪಲಿ ಕೈಗೆ ಬಂದರೆ,

ಇಲ್ಲ ನೀವು ನನಗೆ ೧೦೦ ಗರ್ಲ್ ಎಂದು ಹೇಳಲೇಅವಳುನಂಬಲಿಕ್ಕೇ ಚಾನ್ಸ್ ಇಲ್ಲನೋ ವೆ ಛಾನ್ಸೇ ಇಲ್ಲ

ಅಕಸ್ಮಾತ್ ನಂಬಿದರುಸರಿ ನಿನಗೆ ನಾನು ೧೦೦ ಗರ್ಲ್ಇರಬಹುದು ನೀನು ನನಗೆ  ಕೂಡ ಸೂಟ್ ಆಗೋಲ್ಲಎಂದು ಇರೋ ಮೂರು ಮುಕ್ಕಾಲು ಮರ್ಯಾದೆ ಕಳಿಸಿಬಿಟ್ಟರೆ,ಅವಳು ಹಾಗೆಂದ ಕ್ಷಣಕ್ಕೆ ನನ್ನ ಎದೆ ನಡುಗಿನಾನು ಕುಸಿದುಸಿನಿಮಾಗಳಲ್ಲಿ ತೋರಿಸುವಂತೆ ಜ್ವಾಲಾಮುಖಿ ಸುನಾಮಿಬಂದುಬಿಟ್ರೆ ಕಷ್ಟಜೊತೆಗೆ ಮರ್ಯಾದೆ ಹೊಗೆ.

ನನಗೀಗ ಮೂವತ್ತೆರಡುಹುಡುಗ ಅಲ್ಲ ಮಧ್ಯ ವಯಸ್ಕಆವಾವಿಹಿತ.

ಬಸ್ಸು ಇಳಿದು ಬಿಡಲೇಅರೆ  ಬಸ್ಸು ಯಾಕೆ ಇನ್ನೂಹೊರಡುತ್ತಿಲ್ಲ ಚೂಳಿನ ಡ್ರೈವರಿಗೆ ನನ್ನ ಎಂಜಲು ಬುದ್ದಿಗೊತ್ತಾಗಿಬಿಡ್ತಾ?

ಕೈಲಿ ಎಂತದೋ ಪತ್ರ ಹಿಡಿದಿದ್ದಾಳೆ WHATSAPPಯುಗದಲ್ಲಿ ಲೆಟರ್ ?

 ನಿದ್ದೆ ಮಾಡದೆ ಕಣ್ಣು ಬಾತಿದೆರಾತ್ರಿಯೆಲ್ಲಾ ಪತ್ರ ಬರೆದುಅತ್ತು ಅತ್ತು ಅವಳ ಕಣ್ಣು ಹಾಗಿರಬಹುದಾ?  ಲೆಟ್ಟರಿನಲ್ಲಿಎಷ್ಟೆಲ್ಲ SECRETRS ಅಡಗಿಸಿರಬಹುದ ? ಅಡಗಿದೆಯ ?

ಬಡ್ಡಿ ಮಗ ಡ್ರೈವರು ಗಾಡಿ ಬಿಟ್ಟಅವಳು ಹಿಂದಕ್ಕೆ ಬಹುಹಿಂದಕ್ಕೆ ಬಿಂದುವಾಗುವರೆಗೂ ದೂರ ಹೋದಳುಬಿಂದುವಾಗಿಉಳಿದು ಹೋದಳು. ಅರೆ ಇವಾಗ ನನಗೆ ಧೈರ್ಯ ಬರ್ತಿದೆಅವಳ ಜೊತೆ ಏನು ಮಾತನಾಡಬೇಕು ಎಂದು ಸ್ಪಷ್ಟತೆ ಬರ್ತಿದೆಇದೆಂತ ತಿಕ್ಕಲು ಸಮಸ್ಯೆ ಸ್ವಾಮಿಮತ್ತೆ ಅವಳೆಂದೂ ಸಿಗೋಲ್ಲಹೆಚ್ಚೆಂದರೆ ಈಗ ಸಿಕ್ಕ ಮೂರು ರೆ ನಿಮಿಷವನ್ನು ಒಂದು ಕತೆಮಾಡಿ ಬರೆಯಬಹುದಷ್ಟೆಅದಕ್ಕೆ ೧೦೦ % ಪರ್ಫೆಕ್ಟ್ ಗರ್ಲ್ಎಂದು ಹೆಸರಿಟ್ಟುಹೀಗೆ ಚಳಿಗಾಲದ ಒಂದು ನಡುಗುವಮುಂಜಾವಲ್ಲಿ ಎಂದು ಶುರು ಮಾಡಬಹುದು...

 

ಸುಮಾರು ವರುಷಗಳ ಹಿಂದೆ ಜಗತ್ತಿನ ಯಾವ ಭಾಗದಲ್ಲೋಒಬ್ಬ ಹುಡುಗನಿದ್ದ ಒಂದು ಹುಡುಗಿಯಿದ್ದಳುಅವನಿಗೆಹದಿನೆಂಟು ಅವಳಿಗೆರಡು ವರ್ಷ ಕಮ್ಮಿಹದಿನಾರು. ಅವನುಅಷ್ಟು ಚೆನ್ನಾಗಿರಲಿಲ್ಲಅವಳು ಅಷ್ಟೇಇಬ್ಬರು ಒಂಟಿ,ಆದರಅವರವರ ಮನದಲ್ಲಿ ಇವನೇ ಇವಳೇ ನನಗೆ ೧೦೦ ಪರ್ಫೆಕ್ಟ್ಅಂದುಕೊಂಡಿದ್ದರುಅದು ಒಂದು ಪವಾಡಪವಾಡ ಜರುಗಿಹೋಗಿತ್ತು .

ಬಸ್ಸಿನಿಂದ ಅವಳನ್ನು ನೋಡಿದ ಅವನು ಜಿಗಿದಅವಳ ಮುಂದೆನಿಂತ

ನೀನು ದೇವತೆನಿನಗಾಗಿ  ಜನುಮ ನಾನು ಪಡೆದೆನನಗಾಗಿಗೆಯೇ ನೀನು  ಭೂಮಿಲಿ ಹುಟ್ಟಿದ್ದಿಯ ನೀನು ನನಗೆ೧೦೦ % ಪರ್ಫೆಕ್ಟ್ ಗರ್ಲ್ " ಅಂದ (ಇದೆಂತ ಅಸಂಗತ ಡೈಲಾಗು ಎಂದುಕೊಂಡ)ಅವಳಿಗೂ ಅವನ ನೋಡಿಜನುಮ ಜನುಮದ ಗೆಳೆಯ ಅನಿಸಕ್ಕೆ ಶುರುವಾಗಿ " ಹೌದುನಿನಗಾಗಿ ನಾನು ಭೂಮಿಯಲ್ಲಿ ಹುಟ್ಟಿದ್ದುನೀನಷ್ಟೇ ನನಗೆ೧೦೦ ಪರ್ಫೆಕ್ಟ್ ಹುಡುಗ ಎಂದಳು.

ಮರುಕ್ಷಣವೇ ಬಸ್ ಹತ್ತಿದರುಕೊನೆಯ ನಿಲ್ದಾಣಕ್ಕೆ ಎರಡುಟಿಕೇಟು ಪಡೆದರು

ಕೊನೆಯ ನಿಲ್ದಾಣದ ಪಕ್ಕಕ್ಕಿರುವ ಪಾರ್ಕಿನಲ್ಲಿ ತಬ್ಬಿಕೊಂಡರು

ಪಾರ್ಕಿನ ಪಕ್ಕದ ಥಿಯೇಟರಿನಲ್ಲಿ ಹಳೇ ಪ್ರೇಮದ ಸಿನಿಮಾಕ್ಕೆಕಾರ್ನರ್ ಟಿಕೇಟು ತೆಗೆದುಕೊಂಡರು

ಅವಳಿಗಿಷ್ಟದ ಗೋಲ್ ಗುಪ್ಪದ ಅವನಿಗಿಷ್ಟದ ಮಸಾಲೆ ದೋಸೆತಿಂದು

ಕೈ ಕೈ ಹಿಡಿದು

ಅವನ ರೂಮು ಹೊಕ್ಕಿದಾಗ ಹೊಟ್ಟೆಯೊಳಗೆ ಸಾವಿರಚಿಟ್ಟೆಗಳು..

ಅವನು ಅವಳನ್ನು ಬಳಸುತ್ತಿದ್ದಎಲ್ಲ ಕನಸಂತೆ ನಡೆಯುತ್ತಿತ್ತುಅವಳು ಅವನ ಕೈ ಹಿಡಿದು ಸಡನ್ನಾಗಿ

"ಎಲ್ಲ ಇಷ್ಟು ಈಸಿಯಾಗ್ತಿದೆ ನನಗೆ ಭಯ ಆಗ್ತಿದೆಸುಲಭಕ್ಕೆಸಿಕ್ಕಿದ್ದು ದೀರ್ಘವಾಗಿ ದಕ್ಕದು ಅಂತಾರೆನನಗೆ ನಿನ್ನಕಳೆದುಕೊಳ್ಳಲು ಇಷ್ಟವಿಲ್ಲಒಂದು ಐಡಿಯಾ ನಾವಿಬ್ರೂ ಮತ್ತೆಯಾವತ್ತಾದ್ರೂ ಎಲ್ಲಾದ್ರೂ ಮೀಟ್ ಆದರೆಆದಿನಮದುವೆಯಾಗಿಬಿಡೋನ ಹೇಗಿದ್ರೂ ನಿನಗೆ ನನ್ನ ಪೂರ್ಣಪರಿಚ್ಯ ಇಲ್ಲನನಗೂ ಅಷ್ಟೇನಮ್ಮ ಪ್ರೇಮ ಎಷ್ಟು ಗಟ್ಟಿನೋಡೋಣ "ಎಂದಳುಅವನಿಗೂ ಅದೇ ಸರಿ ಅನ್ನಿಸಿ ಬಸ್ನಿಲ್ದಾಣಕ್ಕೆ ಬಂದರುಆತ ಬಸ್ ಹತ್ತಿ ಅವಳ ನೋಡಿದ ಆಕೆಕೊನೆಯ ಬಾರಿ ಅವನ ನೋಡಿದಳುಬಸ್ ಡ್ರೈವರು ಜಗಿದಸುಪಾರಿಯ ಜೋರಾಗಿ ಉಗಿದು ಬಸ್ ಸ್ಟಾರ್ರ್ಟ್ ಮಾಡಿಹೊರಟೇಬಿಟ್ಟ

ಅವನು ಹೊರಡುತ್ತಿದ್ದ ಬಸ್ಸು ಡಿವೈಡ್ ಗೆ ಹೊಡೆದು ಹುಡುಗನಿಗೆ ತಲೆ ಪೆಟ್ಟಾಗಿ ,ಕಣ್ಣು ಮಂಜು ಬಂತು

ಆಕೆ ರೋಡು ದಾಟುವಾಗ ಜಗಳ ಆಡುತ್ತಿದ್ದ ದಂಪತಿಯಕಾರೊಂದು ಗುದ್ದಿ ಅವಳು ಆಸ್ಪತ್ರೆ ಸೇರಿದಳು

ಹದಿನಾಲ್ಕು ವರುಷದ ನಂತರ ಮತ್ತೆ ಅವರಿಬ್ಬರೂಒಬ್ಬರೊನ್ನೊಬ್ಬರು ಮುಖಾಮುಖಿಯಾಗುವಷ್ಟರಲ್ಲಿ ಅವನಿಗೆನಾಲ್ಕೈದು ಲವ್ವು ಆಗಿ ಕಿತ್ತಾಟ ಆಗಿ , ಪ್ರೀತಿ ಎನ್ನುವುದುಬೊಗಳೆ ಅನ್ನಿಸಿತ್ತುಅವಳಿಗೂ ಒಂದಿಬ್ರು ಹುಡುಗರುಇಷ್ಟವಾಗಿಮಧುರ ಪ್ರಣಯವಾಗಿಪ್ರೀತಿ ವಿಷವಾಗಿದೂರವಾಗಿ ಉಳಿದಳುಪ್ರೀತಿಗಿಂತ ಅಪಾಯಕಾರಿ ರೋಗ ಬೇರೆಇಲ್ಲ ಎಂದುಕೊಂಡಳು

ಮತ್ತೆ ಅವರಿಬ್ಬರೂ ಎದುರಾದಾಗ

ಅವಳಿಗೆ ಅವನು

ಅವನಿಗೆ ಅವಳು ನೆನಪಾದಂತಾಗಿ ನೆನಪಾಗದೆಉಳಿದುಬಿಟ್ಟರುಹದಿನಾಲ್ಕು ವರುಷಗಳ ಹಿಂದಿನ ಮುಗ್ಧತೆಪವಾಡದ ಹಾರ್ಮೋನುಗಳು ಎರಡು ಸತ್ತು ಬದುಕು ವಾಸ್ತವನೋವು ಮೋಸ ಅವರನ್ನು ಬೇರೆಯಾಗಿಸಿತ್ತು

ಅವಳಿಗಾಗಲಿ

ಅವನಿಗಾಗಲಿ

೧೦೦ % ಪರ್ಫೆಕ್ಟ್ ಅಂತ ಅನ್ನಿಸಲೇ ಇಲ್ಲ

ಅವನ ಬಸ್ಸು ಹೊರಟಿತುಅವಳು ಬಲಕ್ಕೆ ಹೋದಳುಅವನುಲೆಫ್ಟ್ ಆದ.

ಚೆ ಎಂತ ಕಿತ್ತೋದ ಡುಬಕ್ ಅಡಕಸಬಿ ಕತೆ ಅಲ್ವಾ?

ಇದನ್ನೇ ನಾನು ಅವಳಿಗೆ ಹೇಳಬೇಕಿತ್ತು.

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು