ಅಲೆ
ಪ್ರೀತಿ,
ಮನಸ್ತಾಪಕ್ಕೆ ನಿಂತು
ಕೆಸರಾಗುತ್ತದೆ
ಪ್ರೀತಿ,
ಅಪ್ಪುಗೆ ಆತ್ಮೀಯತೆಯಲ್ಲಿ
ಹರಿದು ನದಿಯಾಗುತ್ತದೆ
ಪ್ರೀತಿ,
ಘರ್ಷಣೆ ಆಕರ್ಷಣೆಯಲ್ಲಿ
ಕೂಡಿ ಭೋರ್ಗೆರವ ಸಮುದ್ರವಾಗುತ್ತದೆ
ಪ್ರೀತಿ ನೀರಿನ ಹಾಗೆ,
ಹಕಿಯುತ್ತದೆ ಬೆರೆಯುತ್ತದೆ
ಸವೆಸುತ್ತದೆ ಪಾತ್ರ ಬದಲಿಸುತ್ತದೆ
ಪ್ರೀತಿ ದಡಗಳನ್ನು ಸೃಷ್ಟಿಸುತ್ತದೆ
ಆ ಬದೀಲಿ ಅವನು
ಈ ಬದೀಲಿ ಇವಳು
ಮಧ್ಯದೀ ಜೋಲು ಹೊಡೆದು ಹೊರಟ
ಯಾವುದೋ ದಡದ ಬದಿಯ
ಮರದಿಂದ ಬಿದ್ದ ಹಳದಿ ಎಲೆ
ನೆನಪಂತೆ.
ಪ್ರೀತಿ,
ಕೊನೆಯಾಗುವುದೇ ಸಮುದ್ರವಾಗಿ
ಅಲ್ಲಿ ದಡಗಳಿಲ್ಲ ಅಲೆಗಳಷ್ಟೇ ಏರಿಳಿತವಷ್ಟೇ
ಹಿಂದು ಮುಂದಾಗಿ ಮೇಲೇರಿ ಜಿಗಿಯಬೇಕಷ್ಟೆ
ಕೆಸರಿಗೋ
ನದಿಗೋ
ಇಲ್ಲ ದಡಗಳಾಗಿಬಿಡುವ ಬಂಧನದಿಂದ
ಕಳಚಿ ಜೊತೆಗೆ ಹರಿದು ಸಮುದ್ರವ ಸೇರೋಣ
ಅಲೆಗಳಾಗಿಬಿಡೋಣ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ