ಕತಾ ಶೀರ್ಷಿಕೆ: ಒಂದು ಮುಂಜಾವು, ಮೂರು ಸಾವು


ಭಾಗ ೧:
ನನ್ನ ಗೀತಾ ಸತ್ತಳು:
"ಶನಿವಾರದ ಮುಂಜಾವಿನ ಆರಂಭದಲ್ಲಿ ಟೋಲ್ ಗೇಟ್ ನ ಬಸ್ ಸ್ಟಾಪಿನಲ್ಲಿ ಆಕೆ ಹೆಣವಾಗಿದ್ದಳು. ಅವಳ ಮುಂಗುರುಳು ಎಂದಿನಂತೆ ಅವಳ ಹಣೆಯನ್ನು ಮುತ್ತಿಡುತ್ತಿತ್ತು. ನೋಡುತ್ತಿದ್ದವನು ಹಾಗೆಯೇ ಕುಸಿದುಬಿದ್ದೆ. ಪ್ರಜ್ಞೆ ಬರುವುದೊರಳಗೆ ಹೆಣವನ್ನು ಸಾಗಿಸಿಬಿಟ್ಟಿದ್ದರು" ರಾಮಚಂದ್ರನಿಗೆ ಬಲು ಆಘಾತವಾದದ್ದು ಮೊದಲ ಸಾಲನ್ನು ಕಂಡಾಗಲೇ. ನೆನ್ನೆ ತಾನೇ ಅವಳ ಕೈ ಹಿಡಿದು ನೋಡಿದ ಸಿನಿಮ, ಬೆಚ್ಚಗಿನ ಅಂಗೈ ಬಿಸಿ ಹಾಗೆ ಇದೆ. ಒಂದು ರಾತ್ರಿ ಕಳೆಯುವುದರೊಳಗೆ ಆಕೆ ಸತ್ತಳು ಎಂಬುದು ಅವನಿಗೆ ಅರಗಿಸಿಕೊಳ್ಳಲಾಗಲಿಲ್ಲ, ಬಿಕ್ಕಳಿಸಲು ಅವಳೇನೂ ಅವನಿಗೆ ಬಾಲ್ಯದಸಖಿಯಲ್ಲ, ನೆನ್ನೆಯಷ್ಟೇ ಅವಳ ಪ್ರಥಮ ಭೇಟಿಯಾದದ್ದು.

ಭಾಗ ೨:
ತೀರ ಹೊತ್ತು ಒಂದೇ ಕಾಲಲ್ಲಿ ನಿಲ್ಲಲ್ಲಾಗದೇ ಎರಡೂ ಕಾಲು ಸಡಲಿಸಿದ. ಕಾಲಿನ ಒಂದು ಭಾಗ ನಿಧಾನವಾಗಿ ನೋವಿಗೆ ತಿರುಗುತಿತ್ತು. ಆ ನೋವು ಇನ್ನೇನೂ ಪೂರ್ಣ ಪ್ರಮಾಣದಲ್ಲಿ ಅರಿವಾಗಬೇಕು ತಟ್ಟನೇ ಎದುರಲ್ಲಿ ' ಗೀತಾ' ಪ್ರತ್ಯಕ್ಷವಾದಳು. ನೀಲಿಬಣ್ಣದ ಚೂಡಿದಾರ್ ಗೆ ಅವಳ ಹಾಲುಬೆಳದಿಂಗಳ ಮುಖ ಹೊಳೆಯುತಿತ್ತು. ತೀರಾ ಸಣ್ಣವು ಅಲ್ಲದ, ದಪ್ಪವು ಅಲ್ಲದ ಅವಳ ದೇಹ ಸಮಸ್ಥಿತಿ ಸಾರುತಿತ್ತು. ಎಂದಿನಂತೆ ಮುಂಗುರುಳು ಹಣೆಯೊಂದಿಗೆ ಆಟವಾಡುತಿತ್ತು. ಕೈಗಳಿಗಂತೂ ಅವನ್ನೂ ಸಹಿಸುವುದೇ ಕಷ್ಟ. ಬಟ್ಟಕಂಗಳ ಮೋಹಕ ಬೆಡಗಿ ಗೀತಾ ತಟ್ಟನೆ ಎದುರಾದಳು.

ಭಾಗ ೩:
ಜಯರಾಮನು ಗೀತಾಳನ್ನು ಮೂರೂ ವರ್ಷದ ನಂತರ ಭೇಟಿಮಾಡುವ ಉಮೇದಿನಲ್ಲಿದ್ದ. ಎಂಟು ವರ್ಷದ ಪ್ರೇಮ, ಮೂರೂ ವರ್ಷ ವಿರಹದಲ್ಲಿ ಸಿಕ್ಕು ಒದ್ದಾಡಿತ್ತು. ಅವಳನ್ನು ಕೊನೆ ಬಾರಿ ಕಂಡದ್ದು ಮೂರೂ ವರ್ಷದ ಹಿಂದೆ.

ಭಾಗ ೪:
ದಿವ್ಯಾ ಗೀತಾಳೊಂದಿಗೆ ಬಸ್ ಸ್ಟಾಂಡಿಗೆ ಬರುವ ಮುಂಚೆಯೆ ಜಯರಾಮ ಹಾಜರಿದ್ದ. ಮುಂಜಾವಿನ ಚಳಿಗೆ ಕಾಲುಗಳಿನ್ನು ನಡುಗುತಿತ್ತು. ಅದೇ ಕಾಲುಗಳು ಅವಳಿಗಾಗಿ ಮೂರೂ ವರ್ಷಗಳಹಿಂದೆ ನೋಯೂತ್ತಿತ್ತು. ಆಗ ನೋವನ್ನು ಮರೆಸುತ್ತಿದ್ದ ಆಕೆ ಈಗ ಇದ್ದಕ್ಕಿದ್ದಂತೆ ಗೆಳತಿ ದಿವ್ಯಾಳೊಂದಿಗೆ ಬಂದು ನಡುಕ ನಿಲ್ಲಿಸಿದಳು; ಎದೆ ಬಡಿತ ಮಾತ್ರ ನಿಲ್ಲದು.
 
 
ಭಾಗ ೫:
ಅವನ 'ಪ್ರೀತಿ'ಯನ್ನು ಸಾರಸಾಗಟವಾಗಿ ತಿರಸ್ಕರಿಸಿದ ಗೀತಾ ಕಾಲೇಜಿಗೆ ಲೇಟಾಗುತ್ತದೆಂಬ ಸಿಲ್ಲಿ ನೆಪ ಹೇಳಿ '೭೫ ಎ' ಬಸ್ಸನ್ನತ್ತಿದ್ದಳು. ಮೂರೂ ವರ್ಷದ ಹಿಂದೆ ಬದುಕನ್ನು ಜೀವನ್ಮುಖಿಯಾಗಿಸಲು ಪ್ರೇರೇಪಿಸದ ಗೀತಾ ಈಗ ಸತ್ತಳು


ಭಾಗ ೬:
................. ಹಾಗೆಯೇ ಕುಸಿದುಬಿದ್ದೆ, ಪ್ರಜ್ಞೆ ಬರುವದರೊಳಗೆ ಹೆಣವನ್ನು ಸಾಗಿಸಿಬಿಟ್ಟಿದ್ದರು. '೭೫ ಎ' ಬಸ್ ತಿರುವು ತೆಗೆದುಕೊಳ್ಳುವವರೆಗೂ ಜಯರಾಮ ನೋಡುತ್ತಿದ್ದುದು ಒದ್ದೆ ಕಂಗಳ ದುಃಖದಲ್ಲಿ.
ಅವದ್ಯಾವುದೊ ಕೆಟ್ಟಗಳಿಗೆಯಲ್ಲಿ ಬರೆದಿಟ್ಟ ಅವನ ಡೈರಿಯ ಸಾಲುಗಳು. ಅವನ ರೂಮ್ ಮೇಟ್ ನೊಂದಿಗೆ ತಳುಕು ಹಾಕಿಕೊಂಡಿತ್ತು. ನಿನ್ನೆಯಷ್ಟೆ ಅವಳು ಅವನ ತೆಕ್ಕೆಯನ್ನಾವರಿಸಿದ್ದಳು. ಅವನು ಮೈಮರೆತಿದ್ದ.


                                           ****************ಅಂತ್ಯ*************************

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು