ಮರೆಯಲಾಗದ ಎಣ್ಣೆ ಮುಖದವಳ ಅಳು ಹಾಗೂ ನಗು




ಇದು ತೀರಾ ಸತ್ಯದ ಕತೆ ಅಥವಾ ಬರಹ. ನಾನು ನನ್ನ ಡಿಪ್ಲೊಮಾ ಮುಗಿಸಿ ಕೆಲಸದಲ್ಲಿದ್ದು ಅದು ನನ್ನ ಕನಸುಗಳಿಗೆ, ಗಮ್ಯಗಳಿಗೆ ಪೂರಕವಾಗದೆಂದು ತಿಳಿದು ಎಂಜಿನಿಯರಿಂಗ್ ಸೇರಬೇಕೆಂದು ಸಿ.ಇ.ಟಿ ಪರೀಕ್ಷೆಗೆ ಮೂರು ತಿಂಗಳ್ಳಿದ್ದಂತೆ ಕೆಲಸ ಬಿಟ್ಟೆ. ಮೂರು ತಿಂಗಳು ಪೂರ್ತಿ ಪರೀಕ್ಷೆಗೆ ಅಣಿಯಾಗುತ್ತಿದ್ದೆ, ಆಗಷ್ಟೇ ನಾನು ಗಿಟಾರ್ ಕಲಿಯುತ್ತಿದ್ದರಿಂದ ರಾಕ್ ಸಂಗೀತ ಅತೀಯಾಗಿ ಕೇಳುತ್ತಿದ್ದೆ. ಅಲ್ಲದೇ LED ZEPPLIN ತಂಡದ ROBERT PLANT ನಂತೆ ಕೂದಲೂ ಬಿಡಲು ರೆಡಿಯಾಗಿದ್ದೆ. ಮೂರು ತಿಂಗಳಿಗೆ ನನ್ನ ಪರೀಕ್ಷೆ ಮುಗಿದು ಒಳ್ಳೆಯ ಯಾಂಕ್ ಬಂದು ಯು.ವಿ.ಸಿ.ಇ ಕಾಲೇಜಿನಲ್ಲಿ ಸೀಟು ಸಿಕ್ಕಿತ್ತು. ಆ ಮೂರು ತಿಂಗಳಲ್ಲಿ ನನ್ನ ಕೂದಲು ಸ್ವಲ್ಪ ಉದ್ದವಾಗಿಯೇ ಇತ್ತು ಅದನ್ನು ನಾನು ಬೈತಲೆ ತೆಗೆಯುತ್ತಿದ್ದೆ. ಜೊತೆಗೆ ಜೀನ್ಸ್ ಮತ್ತು ಟೀ ಶರ್ಟ್ ಧರಿಸುತ್ತಿದ್ದೆ. ಹೆಚ್ಚು ಕಡಿಮೆ ನನ್ನ ಹೇರ್ ಸ್ಟೈಲ್ ’ಸತ್ಯ ಇನ್ ಲವ್’ ಚಿತ್ರದ ನಾಯಕನನ್ನು ಹೋಲುತ್ತಿದ್ದು,ಈಗಲೂ ನನ್ನ ಸ್ನೇಹಿತರು

ಕಾಲೇಜು ಸುರುವಾಗಿ ಕೆಲವೇ ದಿನಗಳಲ್ಲಿ ಕಾಲೇಜು ಬೇಜಾರಾಗುತ್ತಿತ್ತು, ಕಾರಣ ತರಗತಿಯ ಹೆಚ್ಚಿನ ಜನರು ಟಾಪರ್ಸ್ ಆಗಲು ಯತ್ನಿಸುತ್ತಿದ್ದರು. ಅದು ಖುಶಿಯ ಸಂಗತಿಯೆ ಆದರೆ ಅವರವರಲ್ಲೇ ಬೇರೆಯವರು ಎಷ್ಟರಮಟ್ಟಿಗೆ ಓದುತ್ತಿದ್ದಾರೆ ಎಂಬ ಗುಮಾನಿ. ಸರಿ, ಇನ್ನು ಹುಡುಗಿಯರು ಹೇಗಿರಬಹುದು ಎಂಬ ಸಹಜ ಕುತೂಹಲದಿಂದ ದಿನವು ಒಂದೊಂದು ಬೆಂಚಿನ ಹುಡುಗಿಯರನ್ನು ನೋಡುತ್ತಿದ್ದೆ. ಒಂದು ದಿನ ಕ್ಲಾಸು ಬೋರಾಗಿ ಒಮ್ಮೆ ಹಾಗೆ ಹುಡುಗಿಯರತ್ತ ತಿರುಗಿದೆ, ನಾನು ತಿರುಗಲು ಆಕೆಯು ತಿರುಗಲು ಒಂದೇ ಆಯ್ತು. ಅವಳು ಚೆಲುವೆ, ಎಣ್ಣೆ ಮುಖದ ಚೆಲುವೆ. ಹೀಗೆ ಸುಮಾರು ಮೂರು ಬಾರಿ ಆಕಸ್ಮಿಕವಾಗಿ ತಿರುಗಿ ಕಣ್ಣುಗಳು ಎದುರಾಗಲು, ಆಕೆ ತನ್ನನ್ನೇ ನಾನು ನೋಡುತ್ತಿದ್ದನೆಂದು ಒಂದು ತೆರೆನಾ ಮೂತಿ ಮಾಡಿದಳು ಆ ಕ್ಷಣಕ್ಕೆ ನಿಜಕ್ಕೂ ಚೆಂದಗೆ ಕಂಡಳು. ಆ ನಂತರ ತಲೆಕೊರೆಯುವ ಕ್ಲಾಸುಗಳೆಲ್ಲಿ ಆಕೆಯನ್ನು ನೋಡುತ್ತಿದ್ದೆ, ನನ್ನ ಕಣ್ಣುಗಳು ನನ್ನ ಮಾತುಗಳನ್ನು ಕೇಳುತ್ತಲೇ ಇರಲಿಲ್ಲ. ಆದರೆ ಒಂದಂತು ಸತ್ಯ ನಾನು ಆಕೆಯನ್ನು ಎಷ್ಟು ಬಾರಿ ನಾನು ನೋಡಿದೆನೋ ಆಕೆಯು ಅಷ್ಟು ಬಾರಿ ನನ್ನನ್ನು ನೋಡಿದ್ದಾಳೆ.

ಆಕೆಗೆ ಕೆಲವು ಡ್ರೆಸ್ ಗಳು ತುಂಬಾ ಹೊಂದುತ್ತವೆ. ಆ ಡ್ರೆಸ್ ಗಳಲ್ಲಿ ಆಕೆಗೂ, ಆಕೆಯ ಡ್ರೆಸ್ ಗೂ ಒಂದು ಕಳೆ ಬಂದಿರುತ್ತದೆ. ಉದಾಹರಣೆಗೆ ನೀಲಿ, ಬಿಳಿ, ಕಪ್ಪು ಹಾಗೂ ಹಾಪ್ ಸ್ಲೀವ್ ಡ್ರೆಸ್. ಹೆಚ್ಚು ಕಡಿಮೆ ನನಗೆ ಆಕೆ ಇಷ್ಟವಾದಳು. ಅದರರ್ಥ ನಾನು ಆಕೆಯನ್ನು ಪಿತಿಸುತ್ತಿದ್ದೇನೆಂದಲ್ಲ, ಅದು ಕೇವಲ ಆಕರ್ಷಣೆ. ಆ ನಂತರ ಹೆಚ್ಚು ಕಡಿಮೆ ನನ್ನ ಸ್ನೇಹಿತರೆಲ್ಲರೆದುರು ಆಕೆಯ ಬಗ್ಗೆಯೆ ಕೇಳುತ್ತಿದ್ದೆ ಮತ್ತು ಆಕೆಯನ್ನು ನೋಡುತ್ತಿದ್ದೆ.

ಒಂದು ದಿನ ಆಗಬಾರದ್ದು ಆಗಿಹೋಯ್ತು;

ನನ್ನ ಗೆಳೆಯನೊಬ್ಬ ಆಕೆಯ ಗೆಳೆಯತಿ ಹತ್ತಿರ ಈ ವಿಷಯವನ್ನೆಲ್ಲ ತಿಳಿಸಿ, ನಾನು ಆಕೆಯನ್ನು ತುಂಬಾ ಪ್ರೀತಿಸುತ್ತಿದ್ದೆನೆಂದು ಆಕೆಯ ಮೊಬೈಲ್ ನಂಬರ್ ಬೇಕೆಂದು ಕೇಳಿಬಿಟ್ಟ. ಅದರಲ್ಲಿ ಅವನದೂ ತಪ್ಪಿಲ್ಲ ನಾನು ಅಷ್ಟರ ಮಟ್ಟಿಗೆ ಆಕೆಯ ಬಗ್ಗೆ ಮಾತಾಡುತ್ತಿದ್ದೆ ಹಾಗೂ ನೋಡುತ್ತಿದ್ದೆ. ಹಾಗೇ ಅವನು ಹೇಳಿದ ಮಾರನೇ ದಿನ ಆಕೆ ಆಕೆಯ ಇಬ್ಬರೂ ಸ್ನೇಹಿತೆಯರು ಸೇರಿ ನನ್ನ ಬದಲಿಗೆ ನನ್ನ ಮುಗ್ಧ ಗೆಳೆಯನೊಬ್ಬನ್ನನ್ನು ಕರೆದು " ಇನ್ನು ಮುಂದೆ ಅವನು ಹಾಗೇ ನೋಡಬಾರದೆಂದು ಹೇಳು? ಹಾಗೆ ಹೀಗೆ ಎಂದು ಹೇಳಿದ್ದಾರೆ. ಆ ಕ್ಷಣಕ್ಕೂ ನಾನು ಏನೆಂದು ತಿಳಿದಿದ್ದ ನನ್ನ ಗೆಳೆಯನು ನಾನು ಆತರದವನಲ್ಲೆಂದಾಗ ಆಕೆ ಜೋರಾಗಿ ಅಳಲು ಸುರು ಮಾಡಿದಳಂತೆ. ನಿಜಕ್ಕೂ ನನಗೆ ಬೇಜಾರಯ್ತು ನನ್ನ ಬಗ್ಗೆಯಲ್ಲ ಆಕೆಯನ್ನು ನೋಯಿಸಿದನೆಂದು. ಆದರೆ ಅಷ್ಟು ಬೇಜಾರಾಗಿದ್ದರೆ ಆಕೆ ನನ್ನನ್ನು ದಿನವು ನೋಡುವ ಅವಶ್ಯಕತೆಯೇನಿತ್ತು? ಹಿಂದೆಯೇ ನನ್ನ ಗೆಳೆಯನಿಗೆ ಹೇಳಬಹುದ್ದಿತ್ತಲ್ಲವೇ? ಅಲ್ಲದೇ ಅಳುವ ಅವಶ್ಯಕತೆಯೇನಿತ್ತು? ಆಕೆಯನ್ನು ನೋಡುತ್ತಿದ್ದನೆ ಹೊರತು ಆಕೆ ಅಳುವಂತೆ ಎಂದಿಗೂ ನಾನು ನಡೆದುಕೊಂಡಿರಲಿಲ್ಲ. ಇರಲಿ, ಆಕೆ ಅತ್ತ ದಿನ ಮನೆಗೆ ಹೋಗಿ ಕನ್ನಡಿಯಲ್ಲಿ ಮುಖ  ನೋಡಿಕೊಂಡೆ ಆ ಕ್ಷಣಕ್ಕೆ ನನ್ನ ಕೂದಲು ಚೆಂದ ಕಾಣಿಸಲಿಲ್ಲ. ಮಾರನೇ ದಿನ ನಾರ್ಮಲ್ ಹೇರ್ ಸ್ಟೈಲ್. ಈಗಲೂ ಆಕೆ ಮತ್ತು ಆಕೆಯ ಸ್ನೇಹಿತೆಯರು ನನ್ನನ್ನು ಆಕಸ್ಮಿಕವಾಗಿ ನೋಡುತ್ತಾರೆ. ಅವರ ಮುಖದಲ್ಲೊಂದು ನಗು ಮೂಡುತ್ತದೆ. ಅವಳ ಸ್ನೇಹಿತೆಯರಿಗಿಂತಾ ಅವಳು ನಕ್ಕಾಗ ತುಂಬಾ ಚೆಂದಾಗಿ ಕಾಣುತ್ತಾಳೆ. ಆ ಎಣ್ಣೆ ಮುಖದ ಹುಡುಗಿ.

ಈ ಕಾಲೇಜು ಮುಗಿಯುವವರೆಗೂ ನಾನೆಂದು ಮರೆಯಲಾದ ಅಳುವೆಂದರೆ: ಆ ಎಣ್ಣೆ ಮುಖದವಳ ಅಳು ಹಾಗೂ ನಾನೆಂದು ಮರೆಯಲಾದ ನಗುವೆಂದರೆ ಅವಳ ಸುಂದರ ಹಲ್ಲುಗಳು ಕಾಣುವ ಅವಳ ಚೆಂದ ನಗು...

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಚಲಿತ ಪೋಸ್ಟ್‌ಗಳು