ಹಂಸಲೇಖ ಕಟ್ಟಿದ ಮನೆದೇವ್ರ ಎರಡು ಹಾಡು , ಮೂಡು , ಪಿರಿಯಡ್ಡು , ಗಂಡ ಹೆಂಡ್ರು ಪ್ರೌಡು;
ಪ್ರೀತಿ ಪ್ರೇಮ ದಾಂಪತ್ಯ ವಿಷಯವಿದ್ದ ಕಡೆ ರವಿಮಾಮ ಇರಲೇಬೇಕು, ರವಿಮಾಮ ಇದ್ದ ಮೇಲೆ ಹಂಸಲೇಖ ಖಂಡಿತಾಇರಲೇಬೇಕು. ರವಿಮಾಮನಿಲ್ಲದ ಹಂಸಲೇಖನ ಊಹಿಸಿಕೊಳ್ಳಬಹುದು ಆದರೆ ಕನಸಲ್ಲೂ ಕೂಡ ಹಂಸಲೇಖನಿಲ್ಲದಲೇಖನಿಯಿಲ್ಲದ ಸಾಲುಗಳಿಲ್ಲದ ಸ್ವರಗಳಿಲ್ಲದ ಸಂಗೀತವಿಲ್ಲದ ರವಿಮಾಮನ, ಹಾಡುಗಳನ್ನ ಸಿನಿಮಾಗಳನ್ನ ಊಹಿಸಿಕೊಳ್ಳೊದುಕಷ್ಟ. ಆ ಮಟ್ಟಿಗೆ ಹಂಸಲೇಖ ರವಿಮಾಮನ ಬಾಂಡು.
ರವಿಮಾಮನ ಚಿತ್ರಗಳಲ್ಲಿ ವಿಶಿಷ್ಟವಾದ ಚಿತ್ರ ಮನೆದೇವ್ರು. ಮಾಮೂಲಿ ರವಿಮಾಮನ ಸಿನಿಮಾವಲ್ಲವಾದರೂ ರವಿಮಾಮನಲ್ಲದೇಮತ್ಯಾರು ಮಾಡಲಾಗದ ಸಿನಿಮಾವದು. ಸುಧಾರಣಿಯ ಚಿತ್ರಜೀವನದಲ್ಲಿ ಮಹತ್ತರ ಸಿನಿಮಾ. ಸುಧಾರಾಣಿಯನ್ನ ಆ ತರದಪಾತ್ರದಲ್ಲೂ ನೋಡಬಹುದೆಂದು ತೋರಿಸಿಕೊಟ್ಟಿದ್ದು ರವಿಮಾಮ, ಉಮಾಶ್ರೀಯನ್ನೇ ಪುಟ್ಮಲ್ಲಿ ಮಾಡಿದ ರವಿಮಾಮನಿಗೆಸುಧಾರಾಣಿಗೆ ಜಾನಕಿಯನ್ನಾಗಿ ಮಾಡೋದು ಕಷ್ಟವಲ್ಲ. ಮನೆದೇವ್ರು ಮತ್ತು ಹಾಲುಜೇನು ಸಿನಿಮಾ ನೋಡಿದರೆ ಅರ್ಥಮಾಡಿಕೊಂಡರೆ ಎಂತವರು ಕೂಡ ಸುಖವಾಗಿ ಬದುಕಿ ಸಾಯಬಹುದು ಅಂಬೋದು ನನ್ನ ಅಭಿಪ್ರಾಯ ಎರಡು ಸಿನಿಮಾವೂತಿಳಿಹಾಸ್ಯದ ಮೂಲಕ ಪ್ರೀತಿ ಪ್ರೇಮ ದಾಂಪತ್ಯವನ್ನು ಅದ್ಭುತ ರೀತೀಲಿ ಕಟ್ಟಿ ಕೊಟ್ಟ ಸಿನಿಮಾಗಳು
ಈಗ ವಿಷಯಗೆ ಬರೋಣ, ಮನೆದೇವ್ರು ಸಿನಿಮಾದಲ್ಲಿ ಪ್ಲಸ್ ಪಾಯಿಂಟೆಂದರೆ ಹಾಡುಗಳು. ಅದು ಹಂಸಲೇಖರ ಹಾಡುಗಳು. ಹಂಸಲೇಖ ಅದ್ಯಾವ ಮೂಡಿನಲ್ಲಿ ಬರೆದರೋ ಸ್ವರ ಸಂಯೋಜಿಸಿದರೋ ಗೊತ್ತಿಲ್ಲ ಆ ಮಟ್ಟಿಗೆ ಹಾಡುಗಳಿವೆ. ಸಿನಿಮಾ ನೋಡದೆಬರೀ ಹಾಡುಗಳನ್ನ ಕೇಳಿದರೂ ಸಿನಿಮಾ ಇಳಿಯುವಷ್ಟು ಶಕ್ತವಾದ ಹಾಡುಗಳು.
ಮನೆದೇವ್ರು ಸಿನಿಮಾದಲ್ಲಿ ಹಂಸಲೇಖ ಒಂದು ಅದ್ಭುತವಾದ experiment ಮಾಡಿದ್ದಾರೆ, back to back ಎರಡು ಹಾಡುಗಳನ್ನಅದ್ಭುತವಾಗಿ ಪೋಣಿಸಿದ್ದಾರೆ ಇದರಲ್ಲೀ ನಿರ್ದೇಶಕ ರವಿಮಾಮನ ಪಾಲನ್ನ ಅಲ್ಲಗೆಳೆಯಲಾಗದು. ಈ ಎರಡು ಹಾಡುಗಳು ಗಂಡುಹೆಣ್ಣಿನ ಪ್ರೀತಿಯ ಅದ್ಭುವನ್ನ ಆಡು ಭಾಷೇಲಿ ಎಷ್ಟು ಅದ್ಭುತವಾಗಿ ದಾಟಿಸಿಬಿಡುತ್ತಾರೆ, ಇವತ್ತಿಗೂ ನನಗೆ ಈ ಎರಡು ಹಾಡುಕೇಳಿದಾಗ ಬಡ್ಡಿಮಗಂದು ಹೆವಿ ಖುಷಿಯಾಗಿ ಹುಡ್ಕೊಂಡ್ ಹೋಗಿ ಹಂಸಲೇಖರ ಪಾದದ ಮೇಲೆ ಬಿದ್ದು ಒದ್ದಾಡಿಬಿಡೋಣ ಅನ್ಸುತ್ತೆ.
ನಾಯಕ ರಂಗನಾಥ್ ನಾಯಕಿ ಜಾನಕಿ ಇಬ್ರೂದು ಹೆವಿ ಲವ್ವು ಯಾವ ಲೈಲಾ ಮಜನೂಗೂ ಕಮ್ಮಿ ಇಲ್ಲ. ಇಬ್ಬರೂಮದುವೆಯಾಗಿದ್ದಾರೆ ಮದುವೆಯ ಹೊಸತು, ಇಬ್ಬರಿಗೂ ಒಬ್ಬರ ಮೇಲೊಬ್ಬರಿಗೆ ಹೆವಿ ಲವ್ವು. ನಾಯಕ ಬರೀ ಪ್ರೇಮಿ ಗಂಡ ಅಲ್ಲದೆರಸಿಕ ಬಡ್ಡಿಮಗ, ಜೊತೆಗೆ humorous ಫೆಲೋ. ಆಕೆಯನ್ನ ಗೋಳುಯ್ದು ಮುನಿಸಿಕೊಳ್ಳುವಂತೆ ಮಾಡಿ ನಂತರ ನಗಿಸಿ ರಮಿಸಿಮುದ್ದಿಸಿ ಮಲಗೋ ಗಂಡ.
ಮೊದಲೇ ರಸಿಕ ಆಕೆ ಹುಚ್ಚು ಪ್ರೇಮಿ. ಮದುವೆಯ ಹೊಸತರ ಬಿಸಿ. ಗಂಡ ಅವಳನ್ನ ಹೊರಗೆ ಕರೆದುಕೊಂಡು ಶಾಪಿಂಗು ಸೀರೆಮೂವಿ ಹೋಟೆಲು ಅಂತ ಇಡೀ ದಿನ ಖುಷಿಪಡಿಸಿದ್ದಾನೆ. ಇಷ್ಟು ಚೆಂದ ನೋಡಿಕೊಳ್ಳೊ ಗಂಡನ ನೋಡಿ ಅವಳಿಗೂ ಖುಷಿ ಹೆಮ್ಮೆ. ಮನೆಗೆ ಬಂದೊಡನೆ ರಸಿಕ ರವಿಮಾಮ ಹಾಸಿಗೆಯನ್ನ first night ಲೆವೆಲ್ ಗೆ ಸಿಂಗಾರ ಮಾಡಿ ಕೈಗೆ ಮಲ್ಲಿಗೆಯನ್ನ ಸುತ್ತಿಕೊಂಡುಇಡೀ ರಾತ್ರಿಯನ್ನ ರಸಿಕ ರಾತ್ರಿ ಮಾಡಿಕೊಳ್ಳಲು ರೆಡಿಯಾಗಿ ಮೂಡಿಗೆ ಬಂದಿದ್ದಾನೆ. ಇದನ್ನ ನೋಡಿದ ಕೂಡಲೇ ಹೆಂಡತಿ ಏನ್ರೀ ಹಿಂಗೆಎಂದು ಗಂಡನ ಆತುರವ ನೋಡಿ ನಗುವಳು. ಗಂಡನಿಗೆ ಹೆವಿ ಆತುರ, ಕರೆಯುತ್ತಾನೆ. ಆಗ ಹೆಂಡತಿ ಬೇಜಾರಿನಿಂದ “ ಪಿರಿಯಡ್ “ ಆಗಿದ್ದೇನೆ ಅನ್ನುತ್ತಾಳೆ. ಕಾಮಾತುರಂ ನಾ ಭಯ ನಾ ಲಜ್ಜ ಅನ್ನೊ ಹಾಗೆ ಅಂದುಕೊಂಡ ದಿನ ಅಂದುಕೊಂಡ ಸಮಯ ಅದು ಆಗದೇನಾಯಕನಿಗೆ ಹೆವಿ ಕೋಪ , ಕಾಮ ಕೋಪವಾಗಿ ಕೋಪ ಮಾತಾಗಿ ಮಾತು ಬಾಣವಾಗಿ ಅವಳ ಚುಚ್ಚುವನು, ಬೆಳಗಿಂದಸುತ್ತಾಡಿಸಿದ್ದು ಸೀರೆ ಕೊಡ್ಸಿದ್ದು ಇದುಕ್ಕೇನಾ ಅಂತ ಕೂಗಾಡುವನು. ಇಂತ ಒಂದು ಸ್ಕೆಚ್ ಇತ್ತ ಇವನ ಹತ್ರ ಅಂತ ಅವಳಿಗೂ ಗೊತ್ತಾಗಿಸರಿಯಾಗಿ ಗುಮ್ತಾಳೆ. ಮೊದಲೇ ಪಿರಿಯಡ್ ಟೈಮ್ ಹೆವೀ ಮೂಡು ಸ್ವಿಂಗು ಇವನು ಬೇರೆ ಉಮೇಶ್ ರೆಡ್ಡಿ ತರ ಆಡಿದ್ದು ನೋಡಿಬಿಡ್ತಾಳ ಸರಿಯಾಗಿ ಕ್ಲಾಸ್ ತಗೊಂಡು ಗ್ರಹಚಾರ ಬಿಡಿಸಿ ಅವನ ಈಗೋಗೆ ಪಟಾರ್ ಅಂತ ಬಾರ್ಸಿ ಅಳುತ್ತ ಮಲಕೊತ್ತಾಳೆ.
Next frame ಇಂದ ಹಂಸಲೇಖನ ಮ್ಯಾಜಿಕ್ ಶುರು ಆಗುತ್ತೆ, next 10 mins ಪ್ರೀತಿ ಅಂದರೆ ಏನು ಯಾವ ಲೆವೆಲ್ ಗೆ ಹೇಳ್ತಾರೆಅಂದ್ರೆ ಮತ್ಯಾರು ಹೇಳಕ್ ಸಾಧ್ಯನೇ ಇಲ್ಲ. ಸಾಂಗು ಸುರುವಾಗುತ್ತೆ.
“ನೀನೆ ನನ್ನ ನೀನೆ ನನ್ನ ತುಂಬಾ ತುಂಬಾ ಪ್ರೀತಿ ಮಾಡೋದು” ಅಂತ ನಾಯಕಿ ಹೇಳುವಳು , ಸುಮ್ನೆ ಹೇಳ್ತಿಲ್ಲ ಹೃದಯ ತುಂಬಿಕಣ್ಣಲ್ಲೂ ನೀರು ಉಕ್ಕಿಸುತ್ತಾ ಹೇಳುತ್ತಾಳೆ ಹಾಗೇ ಹೇಳೋಕ್ಕು ಕಾರಣ ಇದೆ ಹಿಂದಿನ ರಾತ್ರಿ ಹೀಟಿಗೆ ಬಂದ ಡಾಗ್ ತರ ಆಡ್ತಾ ಇದ್ದಗಂಡ ಬೆಳಗ್ಗೆಯೇ ಎದ್ದು ಹೆಂಡತಿಗೆ ಬಿಸಿ ನೀರು ಕಾಯಿಸಿಟ್ಟು, ದೋಸೆ ಬೇರೆ ಹಾಕಿ ಅವಳಿಗೆ ತಿನ್ನಿಸುತ್ತಿದ್ದಾನೆ. ಈ ಹಾಡಿಗೂ ಮುಂಚಿನಹಾಡಲ್ಲೀ “ನಾನೇ ನಿನ್ನ ನಾನೇ ನಿನ್ನ ತುಂಬಾ ತುಂಬಾ ಪ್ರೀತಿ ಮಾಡೋದು” ಅಂತ ಓವರ್ ಬಿಲ್ಡಪ್ ಕೊಟ್ಟ ಹೆಂಡ್ತಿ ಗಂಡನ ಪ್ರೀತಿಗೆ ಕ್ಲೀನ್ ಬೋಲ್ಡ್ ಆಗಿ ನಾನಲ್ಲ ನೀನೆ ನನ್ನ ತುಂಬಾ ಪ್ರೀತಿ ಮಾಡೋದು ಅಂತ ಒಪ್ಪಿಕೊಳ್ತಾಳೆ. ಗಂಡ ಏನು ಮರ ಹತ್ತೊಲ್ಲ ಅವನುಅವಳಿಗಿಂತ matured , “ ಇಲ್ಲ ತಾಯಿ ಸೀತಾ ಮಾಯಿ ನೀನೆ ನನ್ನ ಪ್ರೀತಿ ಮಾಡೋದು” ಅಂತ ಡವ್ ಮಾಡ್ತಾನೆ. ಅವಳೇನು ಸುಮ್ನೆಹೇಳ್ತಿಲ್ಲ ಅದಕ್ಕೂ ಕಾರಣ ಇದೆ ಅವಳೇ ಯಾಕೆ ಅಂತ ಹೇಳ್ತಾಳೆ “ಪ್ರೀತಿ ಮಾಡಿ ಅಡುಗೆ ಮಾಡಿ ತಿನಿಸೋ ನಲ್ಲ ಎಲ್ಲೂ ಇಲ್ಲ” ಗಂಡಇದೇನು ಮಹಾ ನೀವು ಹೆಂಡ್ತೀರು ನಮಗಿಂತ ಕಮ್ಮಿ ಇಲ್ಲ ಅಂತ “ ತಾಳಿ ಕಟ್ಟಿ ಬಾಗಿಲು ತಟ್ಟಿ ಕಾಯೋದೆಲ್ಲ ನಿಮಗೆ ಬೆಲ್ಲ “ ಅಂತಾನೆ. ಹೆಂಡತಿಗೆ ನಗು ಖುಶಿ ಮತ್ತೆ ಹೆವಿ ಲವ್ವು. “ ಕೋಪದ ನಡುವೆ ಹಾಡುವುದೆ ಅಂತಃಪುರ ಗೀತೆ ( ಇದೇ ಸಾಲನ್ನ ಹಿಂದಿನ ಹಾಡಲ್ಲೀಏವಳು ಕೋಪಿಸಿಕೊಂಡಾಗ ನಗಿಸಿ ರಮಿಸಿ ಮುದ್ದಿಸುವಾಗ ಹೇಳಿರುತ್ತಾನೆ) “ ಅಂತ ಅವಳು ಹೇಳಿದರೆ “ ವಿರಹದ ನಡುವೆ ಪತಿಇರಲು ಸತಿಯದು ಬರೀ ಮಾತೇ” ನಮ್ ಕಷ್ಟ ನಮಗೆ ನಿಮಗೇನು ಗೊತ್ತು
ಅದಾದ ಮೇಲೆ ಟೈಮ್ ಲಾಪ್ಸು ಡೇಟು ಚೇಂಜು ಬ್ಯಾಕ್ ಗ್ರೌಂಡಲ್ಲೀ ಬಿಜಿಎಂ ಹಾಡು ಮುಗಿದು ನಾಯಕಿಯ ಪಿರಿಯಡ್ ಮುಗಿದುಸ್ನಾನ ಮಾಡಿ ಬಾರೋಲೆ ಅನ್ನೊ ಲೆವೆಲ್ ಗೆ ರೀ ಎಂಟ್ರಿ ಆಗ್ತಾಳೆ. ಮತ್ತೊಂದು ಸಾಂಗು ಸುರುವಾಗುತ್ತದೆ ಮತ್ತೆೊಂದು ಲೋಕ ಓಪನ್ಆಗುತ್ತೆ . ಈ ಹಾಡಲ್ಲೀ ಮೊದಲು ಗಂಡ ಹೊಗಳುತ್ತಾನೆ ಹೆಂಡತಿ ಅವನು ಯಾಕೆ ಹಂಗೆ ಹೊಗಳ್ತಾನೆ ಅಂತ ಉತ್ತರ ಹೇಳಿದರೆಉತ್ತರದ ಅಂತ್ಯಕ್ತೆ ಮಜವಾದ ಪಂಚ್ ಕೊಡುವ ಸಾಲುಗಳಲ್ಲೀ conclude ಮಾಡುವನು. ಈ ತರದ ಪ್ರಯೋಗ ಹಂಸಲೇಖರವಿಮಾಮ ಬಿಟ್ರೆ ಯಾರು ಸ್ವಾಮಿ ಮಾಡ್ತಾರೆ. ಪೋಸ್ಟ್ ಪಿರಿಯಡ್ ಸಾಂಗು ನೋಡೋಣ ಬನ್ನಿ
“ ಸುಂದರಿ ಸುಂದರಿ ಸುಂದರಿ “
ಹೊಗಳಿಗೆ ಯಾವ ಹೆಂಡತಿ ತಾನೇ ಬೀಳೊಲ್ಲ. ಸುಂದರಿ ಎನ್ನೊದು highest complement for woman.ನಮ್ ಹೀರೋ ಅದುಕ್ಕೆಅಲ್ಲಿಂದನೇ ಸುರು ಮಾಡಿ ಸುಂದರಿ ಅನ್ತಾನೆ. ಹೆಂಡತಿಯ ಉತ್ತರ ಹಿಂಗಿದೆ ಅವನೇನು ಸುಮ್ಮನೆ ಸುಂದರಿ ಅನ್ನೊಕೆ ಚಾನ್ಸ್ ಇಲ್ಲಹಾಗೆ ಯಾಕೆ ಹೇಳ್ತಾನೆ ಅಂದ್ರೆ “ ನೀರೆರದ ಹೆಂಡತಿಯ ಗಂಡನು ಸುಂದರಿ ಎನ್ನುವುದು ವಾಡಿಕೆ” ಗೊತ್ತಾಯ್ತ ಸ್ನಾನ ಮಾಡ್ಸುದ್ರೆ ಎಲ್ಲಗಂಡಸಿಗೂ ಸುಂದರಿಯೇ ಅವನ ಹೆಂಡ್ರು ಅನ್ನೊದು ಅವಳ ಸಮಜಾಯಿಸಿ , ಅವನು conclude ಮಾಡೋದು ಹಿಂಗೆ “ ಆತುರದಗಂಡನಿಗೆ ಹೆಂಡತಿ ಕಾಯಿಸಿ ಎರೆಯುವುದು ವಾಡಿಕೆ” ಹೆಂಗೆ ಪಂಚು. ಇಷ್ಚೇ ಅನ್ಕೊಂಡ್ರಾ ಮುಂದೆ ಹೇಳೋ ಸಾಲು ಕೇಳುದ್ರೆ ಕಳೆದುಹೋಗ್ತೀರಾ , ಹಂಗೆ imagine ಮಾಡ್ಕೊಳ್ಳಿ ಇಂತ ಸಾಲು ಹಂಸಲೇಖ ಬಿಟ್ರೆ ಬೇರ್ಯಾರು ಬರೆಯೊಕ್ಕೆ ಚಾನ್ಸೇ ಇಲ್ಲ ನೋ ವೇ . ಹಿಂಗಿದೆ ಆ ಸಾಲುಗಳು “ ಸೀರೆ ಅಂಚು ಬೇಕಮ್ಮ ಸೆರಗು ಅಲ್ಲ ನೆರಿಗೆ ತುದಿಯೂ ಬೇಕಮ್ಮ, ತಲೆಗೆ ಆಸರೆ ಬೇಕಮ್ಮ ಹತ್ತಿಯದಲ್ಲಬಳ್ಳಿಗೆ ಹೋಲುವ ದಿಂಬಮ್ಮ “ ಶುದ್ದಾನುಶುದ್ದ ಅಪ್ಪಟ ಪೋಲಿಯ ದೇಸಿ ಹಂಸಲೇಖ. ಯಾರು ಕೂಡ ಊಹಿಸಲಾಗದಬರೆಯವಾಗದ ಬರೆದರೂ ಇಷ್ಟು ಸಭ್ಯ ಭಾಷೇಲಿ ಪದಗಳಲ್ಲೀ ಯಾರು ಬರೀತಾರೆ ನೀವೆ ಹೇಳಿ.
ಮುಂದಿನ ಹೊಗಳಿಕೆ ಪದ ಕಿನ್ನರಿ. ಅವಳ ಸಮಾಜಾಯಿಸಿ ಕಿಸ್ ಕೆೊಟ್ರೆ ಕಿನ್ನರಿ ಅನ್ನೊದು ಸಹಜ ಅಂತ “ ಜೇನೆರವ ಹೆಂಡತಿಯಗಂಡನೂ ಕಿನ್ನರಿ ಎನ್ನವುದು ವಾಡಿಕೆ” ಅದಕ್ಕೆ ಅವನು ಹಿಂಗೆ conclude ಮಾಡ್ತಾನೆ “ ಊಟಕ್ಕಿಡೋ ಗಂಡನ ಹೆಂಡತಿ ಮಾತಿನಜೇನಿಡುವುದು ವಾಡಿಕೆ”
ಈ ಮುಂದಿನ ಸಾಲು ಹೆಣ್ಣು ಹೆಂಡತಿ ಏನು ಬಯಸುವಳು ಕಾಮ ಪ್ರೇಮದ ಬಾಲೆನ್ಸ್ ಹೇಗೆ ಅಂತ ಎಷ್ಟು effective ಆಗಿದಾಟಿಸುತ್ತಾಳೆ ನೋಡಿ “ ಕಾಮ ಪ್ರೇಮದ ಸುಖ ಕೇಳೋ ಅದಕ್ಕೂ ಮುಂಚೆ ರಾಮ ಸೀತೆಯ ಕತೆ ಹೇಳೋ, ಬೇಗ ಕತ್ತಲೆ ಮೊರೆಹೋಗು ದೀಪದಾಣೆ ಒಂದೇ ಹೆಣ್ಣಿನ ದೊರೆಯಾಗು” ಇದು ಪ್ರತಿ ಹುಡುಗಿಯ ಹೆಂಡತಿಯ ಮನದಾಳವೂ ಹೌದು ವಾರ್ನಿಂಗು ಕೂಡ. ಮತ್ತೆ ಇಡೀ ಚಿತ್ರದ ಆತ್ಮ ಈ ಸಾಲುಗಳು ಹೌದು.
ಸರಿ ಕೊನೆಯ ಹೊಗಳಿಕೆ ದೇವತೆ, ಪ್ರತಿ ಗಂಡಸು ಪ್ರೇಮ ಕಾಮದ ತುದಿಯಲ್ಲಿದ್ದಾಗ ಹೆಣ್ಣಿಗೆ ಹೊಗಳುವ ಪದ ದೇವತೆ, an angel. ಇದಕ್ಕಿಂತ ಇನ್ನೇನೂ ಹೊಗಳಾದೀತು. ಇದಕ್ಕೆ ಅವಳು ಕೊಡೋ fantastic reason ಕೇಳಿ “ ಹುಟ್ಟುಡುಗೆ ಹೆಂಡತಿಯ ಗಂಡನು ದೇವತೆಎನ್ನುವುದು ವಾಡಿಕೆ” ವಾವ್ ! Just amazing ಅಲ್ವ, ಇದಕ್ಕಿಂತ amazing conclude ಅವನದು “ ಪೂಜೆ ಮಾಡೋ ಗಂಡನಿಗೆಹೆಂಡತಿ ದರುಶನ ನೀಡುವುದು ವಾಡಿಕೆ” just an amazing end.
ಈ ರೀತಿಯಾಗಿ ಎರಡು ಹಾಡುಗಳು ಸುರುವಾಗಿ ಎಂಡ್ ಆಗುವುದು. Pre period to period to post period ಸಾಂಗಿದು. ಪ್ರತಿ ಸಲಕೇಳಿದಾಗಲೂ ಹೊಸ ಲೋಕ ಬಡ್ಡಿ ಮಗಂದು dopamine ಸುರಿಯುತ್ತೆ. ಪ್ರೇಮ ಕಾಮ ದಾಂಪತ್ಯವನ್ನೂ ಇದಕ್ಕಿಂತ ಸಿಂಪಲ್ಲಾಗಿಸೊಗಸಾಗಿ ಅದ್ಭುತವಾಗಿ ಹೇಳಕ್ಕೆ ಸಾಧ್ಯನಾ? ಇಂತ ಎರಡು ಹಾಡು ಬರೆದ ಹಂಸಲೇಖರಿಗೆ ಇಲ್ಲಿಂದಲೇ ಉದ್ದಾನು ಉದ್ದ ದೀರ್ಘದಂಡ ನಮಸ್ಕಾರಗಳು.
***
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ