ಒಂದಿಷ್ಟು "ಚಿಲ್ರೆ" ಕಥೆಗಳು....
ಒಂದಿಷ್ಟು ಚಿಲ್ರೆ ಕತೆಗಳನ್ನೇಳುವ ಮುನ್ನ ಒಂದು ಪುಟ್ಟ ಕತೆ ಹೇಳಬೇಕು, ಆಗಷ್ಟೇ ನಿಮಗೆ "ಚಿಲ್ರೆ"ಯ ನಿಜಾರ್ಥ ತಿಳೀದೀತು....
ಅದು ಹೆರಿಗೆ ಆಸ್ಪತ್ರೆ, ತನ್ನ ಮಗಳಿಗೆ ಹೆರಿಗೆ ಸುಖವಾಗಲೆಂದು ತಂದೆ ತಾಯಿಯಿಬ್ಬರು ದೇವರತ್ತ ಮೊರೆಯಿಟ್ಟು ಮುಂದೇನಾಗಬಹುದು ಎಂದು ಕುತೂಹಲ, ಭಯದಿಂದ ಕಾದಿದ್ದಾರೆ. ಅವರ ಕುತೂಹಲಕ್ಕೆ ಕೊಳ್ಳಿಯಿಟ್ಟಂತೆ ಮಗುವಿನ ಅಳು ಕೇಳಿಸುತ್ತದೆ ಆ ಎರಡು ಜೀವಗಳಿಗೆ ಕಣ್ಣೀರು ಕವಲೊಡೆಯುತ್ತದೆ,ಖುಷಿಗೆ..ಸರಿ ಸಿನಿಮಾಗಳಂತೆ ಅವರು ಆ ಮುದ್ದು ಹಸುಗೂಸನ್ನು ಮುತ್ತಿಕ್ಕಿ "ಥೇಟ್ ಅವನಪ್ಪ"ನಂತೆ ಅಂತಾ ಅನ್ನುವಾಗಲೇ ಅವನಪ್ಪ ಪ್ರತ್ಯಕ್ಷನಾಗುತ್ತಾನೆ. "ಎಲ್ಲಾ ಥೇಟ್ ನಿಮ್ಮಂತೆ ಅಳಿಯಂದ್ರೆ" ಎಂದು ಮಗುವನ್ನು ಅವನ ಕೈಗಿಕ್ಕುತ್ತಾರೆ. ಅಳಿಯನ ಮಾತಿಗೆ ಕೂತೂಹಲದಿಂದ ಕಾಯುತ್ತಿದ್ದಾರೆ..ಅಳಿಯ "ಮಾವ ಒಟ್ಟು ನೀವು ಮೂರು ಲಕ್ಷ ಕೊಡಬೇಕು ನೋಡ್ರಿ"ಎಂದು ಬಾಂಬೆಸೆಯುತ್ತಾನೆ. ಅವರಿಬ್ಬರಿಗೂ ಗೊಂದಲ-ಹೆಂಡತಿಯು ಮಿಕ ಮಿಕ ಅವನನ್ನೇ ನೋಡುತ್ತಾಳೆ. ಅವನ ಮುಂದಿನ ಮಾತಿಗೆ ನೀವು ಹಾಗೇ ತಬ್ಬಿಬ್ಬಾಗುತ್ತೀರಾ ನೋಡಿ "ನೋಡಿ ಮಾವ ನಿಮ್ಮ ಮಗಳಿಗೆ ಮಗು ಹುಟ್ಟಿಸಿದಕ್ಕೆ ನಂಗೆ ಖರೆ ಅಂದ್ರ ಮೂರು ಲಕ್ಷ ಕೊಡಬೇಕ್ರಿ, ಯಾಕಂದ್ರ ಮದುವೀಗೆ ಮೂರು ದಿನ ರಜಾ ಹಾಕಿನ್ರಿ , ಮಗು ಮಾಡಲಿಕ್ಕ ನಾನೆಷ್ಟು ಕ್ಯಾಲೋರಿ ಎನರ್ಜಿನಾ ಕಳಕೊಂಡಿನ್ರೀ, ಮೂರು ತಿಂಗಳಾಗ ಒಟ್ಟು ಇನ್ನೂರ ಎಪ್ಪತ್ತು ಘಂಟೆ ಓವರ್ ಟೈಮ್ ಕಳಕೊಂಡಿನ್ರಿ , ಈಗ ಆಟೋದಾಗ ಕೊಟ್ಟ ಐವತ್ತು ಸೇರಿ ಒಟ್ಟು ಮೂರು ಲಕ್ಷ ನೀವು ಕೊಡಬೇಕ್ರಿ" ಎಂದ.ಹುಟ್ಟಿಸಿದ ಸ್ವಂತ ಮಗುವಿಗೆ ಫೀ ಕೇಳೋ ಇವನನ್ನು ನಾನು "ಚಿಲ್ರೆ" ಮನುಷ್ಯ ಎಂದು ಕರೆಯುತ್ತಾನೆ. ಹೀಗೆ ನನ್ನ ಜೀವನದಲ್ಲಿ ಕಂಡ ಒಂದಿಷ್ಟು ಚಿಲ್ರೆ ಕತೆಗಳನ್ನು ಹೇಳಬೇಕಿದೆ.ಕೇಳಿಸಿಕೊಂಡು ಪುಣ್ಯ ಕಟ್ಟಿಕೊಳ್ರಿ:::
ಚಿಲ್ರೆ ಒಂದು:ನಾನು ಮತ್ತು ನನ್ನ ಸ್ನೇಹಿತ ಸಿನಿಮಾ ನೋಡಲೋದವು. ಸರಿ ನಮ್ಮೊಂದಿಗೆ ಇನ್ನಷ್ಟು ನಮ್ಮ ಗೆಳೆಯರು ಸಿನಿಮಾಗೆ ಬರುತ್ತೀವೆಂದು ಹೇಳಿದರು ಸರಿ ಸಿನಿಮಾ ಥಿಯೇಟರ್ ನತ್ತ ಹೊರಟೆವು ಅದೇ ಸಮಯಕ್ಕೆ ಗೆಳೆಯನ ಸ್ನೇಹಿತನು ಬರುವನೆಂದು ಹೇಳಿದ ಸರಿ ಅವನ ಟಿಕೇಟ್ ನಾನೇ ಕೊಂಡುಕೊಂಡೆ. ಸಿನಿಮಾ ಶುರುವಾಗಲು ಇನ್ನತ್ತು ನಿಮಿಷ ಇರುವಾಗ ಅಲ್ಲೇ ಹೊರಗೆ ಹೋಗಿ ಪರೋಟ ತಿಂದೆವು. ಸರಿ ಸಿನಿಮಾ ಮುಗಿಯಿತು ಮನೆಗೆ ಹೊರಡಲು ಮೆಜೆಸ್ಟಿಕ್ಕಿಗೆ ಬಂದು ಇನ್ನೇನೂ ಗೆಳೆಯಗೆ bye ಹೇಳಬೇಕು ಆತ" ಮಗಾ ನಿಂದು ಪರೋಟಗೆ ನಾನೇ ದುಡ್ಡು ಕೊಟ್ಟಿದ್ದು 20 rs ಕೊಟ್ಟಿದ್ದು ನಾಳೆ ತಗೊಂಡ್ ಬಾರೊ" ಎಂದ.ಕೊನೆಗೂ ಒಂದು "ಚಿಲ್ರೆ" ಕಥೆಗೆ ಸಾಕ್ಷಿಯಾಗಿಬಿಟ್ಟ.ಕೊಡಿಸಿದ ಊಟಕ್ಕೂ ದುಡ್ಡು ಕೇಳುವ ಮಂದಿಯನ್ನು ಮೊದಲ ಬಾರಿಗೆ ಕಂಡೆ.ಅದು ನಾವು ಎಂಜಿನಿಯರಿಂಗ್ ಸ್ಟೂಡೆಂಟ್ಸ್ ಬೇರೆ!!!.
ಚಿಲ್ರೆ ಎರಡು:ಇದು ನನ್ನ ಅನುಭವವಲ್ಲ ನನ್ನ ಗೆಳೆಯ ಭಟ್ಟನ ಅನುಭವಕ್ಕೆ ಬಂದಿದ್ದು. ಆತನೇ ನನಗೊಮ್ಮೆ ಹೇಳಿದ್ದು :ಭಟ್ಟ ಮತ್ತು A ಇಬ್ಬರೂ ಎಂದಿನಂತೆ ಸೆಂಟ್ರಲ್ ಕಾಲೇಜಿಗೆ breakfast ಮಾಡಲೋದರಂತೆ. ಸರಿ ಇಬ್ಬರೂ ಬ್ರೇಕ್ ಫಾಸ್ಟ್ ಮುಗಿಸಿ ಹೊರಬರುವಾಗ A "ಭಟ್ಟ್ರೆ ಬೋಂಡಾದು ಎರಡು ರೂಪಾಯಿ ನನಗೆ ಕೊಡಬೇಕು" ಎಂದನಂತೆ. ಆಗ ಭಟ್ಟರಿಗೆ ಹೇಗಾಗಿರಬಹುದು?? ಭಟ್ಟರು ಜೇಬಿಂದ ಇಪ್ಪತ್ತು ರೂಪಾಯಿ ನೋಟೊಂದನ್ನು ಕೊಟ್ಟಿದ್ದಕ್ಕೆ A ಹದಿನೆಂಟು ರೂಪಾಯಿ ಕರೆಕ್ಟಾಗಿ ಹಿಂದಿರುಗಿಸಿದನಂತೆ!!!!.ಈ ಮೇಲಿನ ಎರಡು ಸಂಗತಿಗಳಲ್ಲಿ ಇಬ್ಬರೂ ಕೊಡಿಸಿದ ಪರೋಟಕ್ಕೆ, ಬೋಂಡಾಕ್ಕೆ ದುಡ್ಡು ಕೇಳಿದ್ದು ತಪ್ಪಾ? ಸರಿನಾ ಗೊತ್ತಿಲ್ಲ? .OFFCOURSE ಪ್ರತಿ ರೂಪಾಯಿಗೂ ಬೆಲೆಯಿದೆ. ಆದರೂ ಕೊಡಿಸಿದ ಬೋಂಡಾಕ್ಕೆಲ್ಲ ದುಡ್ಡು ಕೇಳುವುದು ನನ್ನ ಪ್ರಕಾರ ಚಿಲ್ರೆ ಸಂಗತೀನೇ. ಏಕೆಂದರೆ ಒಂದು ರೂಪಾಯಿ ಎರಡು ರೂಪಾಯಿಗೆ ಕಿತ್ತಾಡಲು ನಾವೇನು LKG ಮಕ್ಕಳೇ, ಎಂಜಿನಿಯರಿಂಗ್ ಸ್ಟೂಡೆಂಟ್ಸ್!! ಸ್ನೇಹಕ್ಕೇ ಎರಡೂ ರೂಪಾಯಿ ಬೆಲೆಯಿಲ್ಲವೇ??
ಚಿಲ್ರೆ ಮೂರು:ಇದು ಸಕತ್ ಚಿಲ್ರೆ ಸಂಗತಿ. ಗೆಳೆಯ ಪ್ರಿಯೇಶನು ತನ್ನ ಬರ್ತ್ ಡೇ ಪಾರ್ಟಿಯನ್ನು ಬಸವೇಶ್ವರ ನಗರದ "ಎ2ಬಿ’ ಯಲ್ಲಿ ಕೊಡಿಸಲು ನಮ್ಮನ್ನೆಲ್ಲ ಕೆ.ಆರ್.ಸರ್ಕಲ್ ನಿಂದ ಕರೆದೊಯುತ್ತಿದ್ದ. ಸರಿ ಬರ್ತ್ ಡೇ TREAT!!! ಮಿಸ್ ಮಾಡ್ತೀವಾ? ಮೆಜೆಸ್ಟಿಕಿನಿಂದ 96 ಬಸ್ ಹತ್ತಿ ಕೂತೆವು. ಸರಿ ಭಾಷ್ಯಂ ಸರ್ಕಲ್ ಗೆ ಟಿಕೇಟು. T ಯು ಪ್ರತೀಕ್ಷಿತನಿಗೆ ಟಿಕೇಟು ಕೊಳ್ಳಲು 10 ರೂಪಾಯಿ ಕೊಟ್ಟ. ಸರಿ ಪ್ರತೀಕ್ಷಿತನು ತೆಗೆದುಕೊಂಡ. ಸರಿ ಭಾಷ್ಯಂ ಸರ್ಕಲ್ ಬಂದು ಬಸ್ಸಿಂದ ಇಳಿಯುವಾಗ T ಯು ನನ್ನ ಹತ್ತಿರ ಬಂದು ಟಿಕೇಟ್ ಚಾರ್ಜ್ ಎಷ್ಟು ಅಂದ ನಾನು 9 ರೂಪಾಯಿ ಎಂದೆ. ಕೂಡಲೇ ಪ್ರತೀಕ್ಷಿತನತ್ತಿರ ಒಂದು ರೂಪಾಯಿ ಕೇಳಿ ತೆಗೆದುಕೊಂಡ!!! ಇದು ನಾ ಕಂಡ ಚಿಲ್ರೆ ಕಥೆಗಳಲ್ಲೇ ತುಂಬಾ ನಗು ಬರಿಸಿದ ಚಿಲ್ರೆ ಕಥೆ!!!
ಚಿಲ್ರೆ ನಾಲ್ಕು:ಇದು ಕೊನೆಯ ಚಿಲ್ರೆ ಕತೆ. ACTUALLY ಅವತ್ತು ವಾಪಸ್ಸು ಬೆಂಗಳೂರಿಗೆ ಬರಬೇಕಿತ್ತು ಶಿವಮೊಗ್ಗದಿಂದ ಆದರೆ ರೈಲಿಗೆ ಉದ್ದ ಕ್ಯೂ ಇದುದ್ದರಿಂದ ಗೆಳೆಯನ ಮನೆಯಲ್ಲೇ ಉಳಿದುಕೊಂಡೆ. ಆ ದಿನ ಅವರ ಮನೆಯವರೂ ಅವನಕ್ಕನಿಗೆ ಗಂಡು ಹುಡುಕಲು ಹೋಗಿದ್ದರು. ಸರಿ ಅವನ ಮನೆಯಲ್ಲೇ ಉಳಿಯುತ್ತೇನೆ ಎಂದಾಗ ಆತ ಏನೂ ಪ್ರತಿರೋಧಿಸದ ಕಾರಣ ಉಳಿದಿದ್ದೆ. ಇನ್ನೇನೂ ಮಲಗಬೇಕು ಆತನ ಅಪ್ಪ ಫೋನ್ ಮಾಡಿದರು. ಅವನು ಮಾತಾಡತೊಡಗಿದ ಮದ್ಯೆ ಅವರಪ್ಪ ನನ್ನನ್ನು ಕೇಳಿದರು. ಅದಕ್ಕವನು " ಇಲ್ಲ ಅವನು ರೈಲಲ್ಲಿ ಬೆಂಗಳೂರಿಗೋದ" ಎಂದ!!!. ಆತ ಯಾಕ್ ಹಾಗೆ ಹೇಳಿದನೋ ಗೊತ್ತಿಲ್ಲ!! ಆ ದಿನ ನಿದ್ರೆ ಮಾಡದೇ ಬೆಳಗ್ಗೆ ಐದಕ್ಕೇನೇ ಶಿವಮೊಗ್ಗದಿಂದ ರೈಲಿಡಿದು ಬೆಂಗಳೂರಿಗೆ ಹೊರಟು ಬಂದೆ.ಇಂತಹ ಅದೆಷ್ಟೋ ಚಿಲ್ರೆ ಕತೆಯನ್ನು ಎಂಜಿನಿಯರಿಂಗ್ ಸೇರಿದ ಮೇಲೆ ಕಂಡದ್ದಿದೆ ಆದರೆ ಮೇಲಿನ ನಾಲ್ಕು ನನ್ನನ್ನು DISTURB ಮಾಡಿದ್ದುಂಟು ಅದಕ್ಕೆ ಬರೆದೆ.ಮೇಲೆ ಬಂದ ನನ್ನ ಗೆಳೆಯರು "ಚಿಲ್ರೆ" ನಾ? ಅದು ನಿಮಗೆ ಬಿಟ್ಟ ಸಂಗತಿ.

Hey, What exactly U r going to say by this??? or What U expecting??. R U taking revenge by this???.. than what is the difference between U and them??
ಪ್ರತ್ಯುತ್ತರಅಳಿಸಿDon't post this kind of idiotic things ..
R U think that studying BE means there will not be a financial problems .....
don't loose relationship's yar, by writing this kind of ****
Very sorry to say, stop this nonsense.
Hopes U understands.. and don't need reply for this.